ದಂಡ ಪಾವತಿಸಿದ ಶಾಸಕ

18
Published on

ಮೈಸೂರು: ಸಂಚಾರ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶಾಸಕ ಎಲ್.ನಾಗೇಂದ್ರ ಶನಿವಾರ ಸ್ವಯಂ ಪ್ರೇರಣೆಯಿಂದ ದಂಡ ಪಾವತಿಸಿ ಗಮನ ಸೆಳೆದರು.


ನಗರದ ಮೆಟ್ರೋಪೋಲ್ ವೃತ್ತದಲ್ಲಿ ಸಂಚಾರ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಈ ಸಮಯದಲ್ಲಿ ತಾವು ಚಲಿಸುತ್ತಿದ್ದ ಇನ್ನೋವಾ ಕಾರಿನ ನೋಂದಣಿಯನ್ನು ತಪಾಸಣೆ ಮಾಡಿಸಿದರು.

ವೇಗದ ಚಾಲನೆಗಾಗಿ ದಂಡ ವಿಧಿಸಿರುವುದು ದಾಖಲಾಗಿತ್ತು. ಆಗ ದಂಡದ ಮೊತ್ತ 3500 ರೂ.ಗಳನ್ನು ಪಾವತಿಸಿ ರಶೀದಿ ಪಡೆದರು. ದೇವರಾಜ ಸಂಚಾರಿ ಠಾಣೆ ಪೊಲೀಸ್ ಉಪ ನಿರೀಕ್ಷಕಿ ಬಂಡಿ, ಪೊಲೀಸ್ ಸಿಬ್ಬಂದಿಯಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net