

ಧಾರವಾಡ: ಜೂನ್ 26ರವರೆಗೆ ಜಿಲ್ಲೆಯಲ್ಲಿ ಕರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 4. ಜುಲೈ 26ರಂದು ಈ ಸಂಖ್ಯೆ 95. ಭಾನುವಾರ ಮೃತಪಟ್ಟ 6 ಜನರೂ ಇದರಲ್ಲಿ ಸೇರಿದ್ದಾರೆ. ಕಳೆದೊಂದು ತಿಂಗಳಲ್ಲಿ ದಿನಕ್ಕೆ ಸರಾಸರಿ ಮೂವರು ಚೀನಾ ವೈರಸ್ ಪೀಡಿತರು ಸಾವಿಗೀಡಾಗುತ್ತಿದ್ದಾರೆ!
ಈ ತಿಂಗಳಲ್ಲೇ ಸಾವಿನ ಸಂಖ್ಯೆ 100ಕ್ಕೆ ತಲುಪುತ್ತದೇನೋ ಎಂಬ ಆತಂಕ ಉಂಟಾಗಿದೆ.
ಪ್ರತಿಯೊಬ್ಬ ವ್ಯಕ್ತಿಯೂ ಸುರಕ್ಷತಾ ಕ್ರಮಗಳನ್ನು ಅನುಸರಿಸಲೇಬೇಕು ಎಂಬುದನ್ನು ಅಂಕಿ ಅಂಶಗಳು ಸಾರಿ ಹೇಳುತ್ತಿವೆ.
165 ಪತ್ತೆ: ಜಿಲ್ಲೆಯಲ್ಲಿ ಭಾನುವಾರ 165 ಜನರಲ್ಲಿ ಕರೊನಾ ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3187ಕ್ಕೆ ಏರಿದೆ.
ಭಾನುವಾರ ದೃಢಪಟ್ಟ 165ರಲ್ಲಿ ಧಾರವಾಡ ತಾಲೂಕಿನ 62, ಹುಬ್ಬಳ್ಳಿ 88, ಕುಂದಗೋಳ 4, ಕಲಘಟಗಿ 4, ಅಣ್ಣಿಗೇರಿ 1, ಗದಗ 2, ಕಾರವಾರ 1, ಬೆಳಗಾವಿ 1, ರಾಯಚೂರು 1 ಹಾಗೂ ಬಳ್ಳಾರಿ ಜಿಲ್ಲೆಯ 1 ಪ್ರಕರಣ ಸೇರಿವೆ.
ಧಾರವಾಡ ತಾಲೂಕು: ಮದಾರಮಡ್ಡಿ 4ನೇ ಕ್ರಾಸ್ನ 80 ವರ್ಷದ ವೃದ್ಧೆ, ಕಲಘಟಗಿ ರಸ್ತೆಯ ಪೊಲೀಸ್ ಟ್ರೖೇನಿಂಗ್ ಶಾಲೆಯ 52, 42 ವರ್ಷದ ಪುರುಷರು, 27 ವರ್ಷದ ಇಬ್ಬರು, 23 ವರ್ಷದ ಒಬ್ಬ ಯುವಕ, ಕ್ಯಾರಕೊಪ್ಪ ನಗರಕರ ಕಾಲನಿ 3ನೇ ಕ್ರಾಸ್ನ 36 ವರ್ಷದ ಯುವತಿ, ಕ್ಯಾರಕೊಪ್ಪ ಆನಂದ ನಗರದ 55ರ ಮಹಿಳೆ, ಮುಗದ ಗ್ರಾಮ ಪ್ಯಾಟಿ ಓಣಿಯ 27 ವರ್ಷದ ಯುವತಿ, ಕುಮಾರೇಶ್ವರನಗರದ 26ರ ಯುವಕ, ಹೊಸಯಲ್ಲಾಪುರದ 36 ವರ್ಷದ ಯುವಕ, ಸತ್ತೂರ ವನಸಿರಿ ನಗರದ 33, 39 ವರ್ಷದ ಪುರುಷರು, 24ರ ಯುವತಿ, ಮದಿಹಾಳದ 48, 57 ವರ್ಷದ ಪುರುಷರು, 19, 33 ವರ್ಷದ ಯುವಕರು, 50, 57, 60 ವರ್ಷದ ಮಹಿಳೆಯರು, ಲೈನ್ಬಜಾರದ 24ರ ಯುವಕ, ಕರಡಿಗುಡ್ಡ ಗ್ರಾಮದ 35 ವರ್ಷದ ಯುವಕ, ಮಾಳಾಪುರದ 30 ವರ್ಷದ ಯುವತಿ, ಪೊಲೀಸ್ ಹೆಡ್ ಕ್ವಾರ್ಟರ್ಸ್ನ 29 ವರ್ಷದ ಯುವಕ, ಸಂಪಿಗೆನಗರದ 28ರ ಯುವಕ, ಮಾಳಮಡ್ಡಿ ಮಂಜುನಾಥಪುರದ 53 ವರ್ಷದ ಪುರುಷ, ಎಂ.ಬಿ. ನಗರದ 35 ವರ್ಷದ ಯುವಕ, ಪತ್ರೇಶ್ವರ ನಗರದ 31ರ ಯುವಕ, ಬಾರಾ ಇಮಾಮಗಲ್ಲಿಯ 63 ವರ್ಷದ ವೃದ್ಧ, ಮಿಷನ್ ಕಾಂಪೌಂಡ್ನ 74ರ ವೃದ್ಧೆ, ಹೆಬ್ಬಳ್ಳಿ ಹಿರೇಮಠ ಓಣಿಯ 47 ವರ್ಷದ ಪುರುಷ, ನಾರಾಯಣಪುರದ 18ರ ಯುವಕ, 45 ವರ್ಷದ ಮಹಿಳೆ, ಮೆಹಬೂಬನಗರದ 30, 31, 35 ವರ್ಷದ ಯುವಕರು, ಸೈದಾಪುರದ 31 ವರ್ಷದ ಯುವಕ, ಹಾವೇರಿಪೇಟೆ ರಾಜನಗರದ 33ರ ಯುವಕ, ಗುಲಗಂಜಿಕೊಪ್ಪದ 35 ವರ್ಷದ ಯುವಕ, ರೇಣುಕಾನಗರದ 34ರ ಯುವಕ, ಮನಸೂರ ಗ್ರಾಮದ 33 ವರ್ಷದ ಯುವಕ, ನವಲೂರಿನ 33 ವರ್ಷದ ಯುವಕ, ಎಸ್ಡಿಎಂ ಆಸ್ಪತ್ರೆಯ 35 ವರ್ಷದ ಯುವತಿ, ರಾಯಾಪುರದ 43 ವರ್ಷದ ಮಹಿಳೆ, 30 ವರ್ಷದ ಪುರುಷ, ಟೋಲ್ನಾಕಾದ 68ರ ವೃದ್ಧ, ಶ್ರೀರಾಮ ನಗರದ 45 ವರ್ಷದ ಪುರುಷ, ಶಿವಾಜಿ ವೃತ್ತ ಪ್ರೇಮನಗರದ 28 ವರ್ಷದ ಯುವತಿ, ಕಿಲ್ಲಾ ಪ್ರದೇಶದ 33 ವರ್ಷದ ಯುವಕ, ಮರಾಠಾ ಕಾಲನಿಯ 73ರ ವೃದ್ಧೆ, ಗುಲಗಂಜಿಕೊಪ್ಪದ 33 ವರ್ಷದ ಯುವಕ, ವಿದ್ಯಾಗಿರಿಯ 29 ವರ್ಷದ ಯುವತಿ, ಸವದತ್ತಿ ರಸ್ತೆ ಮಲ್ಲಿಕಾರ್ಜುನನಗರದ 31ರ ಯುವಕ, ನಾರಾಯಣಪುರದ 75ರ ವೃದ್ಧ, 48 ವರ್ಷದ ಪುರುಷ, ಎಪಿಎಂಸಿ ಮಟ್ಟಿ ಪ್ಲಾಟ್ನ 29 ವರ್ಷದ ಯುವಕ, ಗುಳೇದಕೊಪ್ಪ ಗ್ರಾಮದ 32 ವರ್ಷದ ಯುವಕ, ಸಂಪಿಗೆನಗರ ದೊಡ್ಡನಾಯಕನಕೊಪ್ಪದ 45 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
ಹುಬ್ಬಳ್ಳಿ ತಾಲೂಕು:
ವಿದ್ಯಾನಗರ ಶಕ್ತಿ ಕಾಲನಿಯ 42 ವರ್ಷದ ಪುರುಷ, 49ರ ಮಹಿಳೆ, ಶಿರೂರ ಪಾರ್ಕ್ನ 31ರ ಯುವಕ, ವಿಮಾನ ನಿಲ್ದಾಣದ 30, 31 ವರ್ಷದ ಯುವಕರು, ಅಕ್ಷಯ ಕಾಲನಿಯ 30 ವರ್ಷದ ಯುವತಿ, ಮರಾಠಾ ಗಲ್ಲಿಯ 45 ವರ್ಷದ ಪುರುಷ, ಚನ್ನಪೇಟ ಅಂಬೇಡ್ಕರ್ನಗರದ 38ರ ಮಹಿಳೆ, ಆದರ್ಶ ನಗರದ 48, 57 ವರ್ಷದ ಪುರುಷರು, 20ರ ಯುವಕ, ಪುರುಷೋತ್ತಮ ನಗರದ 51ರ ಪುರುಷ, ಆನಂದನಗರದ 17 ವರ್ಷದ ಬಾಲಕಿ, 56ರ ಪುರುಷ, ಲೋಹಿಯಾನಗರದ 65ರ ವೃದ್ಧ, ನವನಗರ ಶಿವಾನಂದ ನಗರದ 36ರ ಮಹಿಳೆ, ಆರ್ಪಿಎಫ್ ಬ್ಯಾರಕ್ನ 59 ವರ್ಷದ ಪುರುಷ, 28ರ ಯುವಕ, ಆರ್ಪಿಎಫ್ ಬ್ಯಾರಕ್ ಮೌಲಾಲಿ ಮೈದಾನದ 56, 47, 40 ವರ್ಷದ ಪುರುಷರು ಮತ್ತು ಕಲ್ಯಾಣಕೇಂದ್ರದ 52ರ ಪುರುಷ, ಲಿಂಗರಾಜನಗರದ 57 ವರ್ಷದ ಪುರುಷ, ಹಳೇಹುಬ್ಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ 52ರ ಪುರುಷ, ಇಂಡಿಪಂಪ್ ಆಸಾರ ಓಣಿಯ 57 ವರ್ಷದ ಮಹಿಳೆ, ಗೋಕುಲ ರಸ್ತೆಯ 34 ವರ್ಷದ ಯುವಕ, ನವನಗರ ನಂದೀಶ್ವರನಗರದ 53 ವರ್ಷದ ಮಹಿಳೆ, ವಿಜಯ ನಗರದ 36, 37 ವರ್ಷದ ಪುರುಷರು, 61, 63, 72 ವರ್ಷದ ವೃದ್ಧರು, ಕೇತೇಶ್ವರ ಕಾಲನಿಯ 57ರ ಪುರುಷ, ಅರಿಹಂತ ನಗರದ 50ರ ಮಹಿಳೆ, ಡಾಲರ್ಸ್ ಕಾಲನಿಯ 47ರ ಪುರುಷ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ 26ರ ಯುವಕ, ರೈಲ್ವೆ ನಿಲ್ದಾಣ ಬಳಿಯ 23 ವರ್ಷದ ಯುವಕ, ಶ್ರೀನಗರದ 20 ವರ್ಷದ ಯುವತಿ, ಅಧ್ಯಾಪಕ ನಗರದ 62 ವರ್ಷದ ವೃದ್ಧ, ಅರವಿಂದನಗರದ 54ರ ವರ್ಷದ ಪುರುಷ, ವಿನೋಬಾನಗರದ 45 ವರ್ಷದ ಪುರುಷ, ಅದರಗುಂಚಿ ಗ್ರಾಮದ 39 ವರ್ಷದ ಪುರುಷ, ಜವಳಿ ಪ್ಲಾಟ್ನ 35ರ ಯುವಕ, ಕೋಟಿಲಿಂಗೇಶ್ವರ ನಗರದ 53ರ ಪುರುಷ, ಕುಸುಗಲ್ ಗ್ರಾಮದ 50 ವರ್ಷದ ಪುರುಷ, ಸಾಯಿನಗರ ವಾಯುಪುತ್ರ ಬಡಾವಣೆ 47 ವರ್ಷದ ಪುರುಷ, ಗಾಮನಗಟ್ಟಿ ಸಾವಂತನವರ ಓಣಿಯ 26, 28 ವರ್ಷದ ಯುವಕರು, ಆರ್ಪಿಎಸ್ಎಫ್ ಕ್ವಾರ್ಟರ್ಸ್ನ 29 ವರ್ಷದ ಇಬ್ಬರು ಯುವಕರು, ಕೇಶ್ವಾಪುರದ 58 ವರ್ಷದ ಮಹಿಳೆ, ಹಳೇಹುಬ್ಬಳ್ಳಿಯ 24 ವರ್ಷದ ಯುವತಿ, ವಿಕಾಸನಗರದ 33 ವರ್ಷದ ಯುವತಿ, ಕಾರುಣ್ಯ ಕಾಲನಿಯ 50 ವರ್ಷದ ಮಹಿಳೆ, ರುದ್ರಾಕ್ಷಿಮಠ ಬಳಿಯ 50 ವರ್ಷದ ಮಹಿಳೆ, ಚೇತನಾ ಕಾಲನಿಯ 53 ವರ್ಷದ ಪುರುಷ, ಲಯನ್ಸ್ ಸ್ಕೂಲ್ ಬಳಿಯ 38 ವರ್ಷದ ಯುವತಿ, ಬಿಡ್ನಾಳ ಮಾರುತಿನಗರದ 46 ವರ್ಷದ ಪುರುಷ, ಮಯೂರಿ ಗಾರ್ಡನ್ನ 27 ವರ್ಷದ ಯುವತಿ, ಮಣಿಕಂಠ ನಗರದ 53 ವರ್ಷದ ಪುರುಷ, ಕೇಶ್ವಾಪುರ ತಳವಾರ ಓಣಿಯ 68ರ ವೃದ್ಧೆ, ಜನ್ನತನಗರದ 43ರ ಪುರುಷ, ಮಧುರಾ ಪ್ಲಾಟ್ನ 45ರ ಪುರುಷ, ಇಎಸ್ಐ ಕ್ವಾರ್ಟರ್ಸ್ನ 13 ವರ್ಷದ ಬಾಲಕ, ಸಿದ್ಧಲಿಂಗೇಶ್ವರ ನಗರದ 74ರ ವೃದ್ಧೆ, ಸಬ್ಜೈಲ್ನ 34 ವರ್ಷದ ಮಹಿಳೆ, ಆಜಾದ್ ಪಾರ್ಕ್ನ 37 ವರ್ಷದ ಪುರುಷ, ಅರಳಿಕಟ್ಟಿ ಓಣಿಯ 29ರ ಯುವಕ, ಸುಳ್ಳ ರಸ್ತೆ ರಾಘವೇಂದ್ರ ಕಾಲನಿ ಜೆಡ್ಎನ್ಕೆ ಅವೆನ್ಯೂ ಅಪಾರ್ಟ್ವೆುಂಟ್ನ 52ರ ಪುರುಷ, ಸುಭಾಷನಗರದ 45 ವರ್ಷದ ಪುರುಷ, ಅಕ್ಷಯ ಕಾಲನಿ ಓಂ ಎನ್ಕ್ಲೇವ್ನ 48ರ ಮಹಿಳೆ, ಭಂಡಿವಾಡದ 36 ವರ್ಷದ ಪುರುಷ, ಮಂಜುನಾಥನಗರದ 66ರ ವೃದ್ಧ, ಸಿದ್ದನಪೇಟೆಯ 98ರ ವೃದ್ಧ, ಅರಿಹಂತನಗರ ಫೆಸಿಫಿಕ್ ಮ್ಯಾನ್ಷನ್ನ 59 ವರ್ಷದ ಪುರುಷ, ರಾಮಲಿಂಗೇಶ್ವರ ನಗರದ 55ರ ಪುರುಷ, ನವನಗರದ 68ರ ವೃದ್ಧ, 34 ವರ್ಷದ ಯುವಕ, ಕಸಬಾಪೇಟ ಪೊಲೀಸ್ ಠಾಣೆಯ 28 ವರ್ಷದ ಯುವಕ, ರೈಲ್ವೆ ಸ್ಟೇಷನ್ ತುಂಗಭದ್ರಾ ಕ್ವಾರ್ಟರ್ಸ್ನ 29ರ ಯುವಕ, ಎಸ್.ಎಂ. ಕೃಷ್ಣ ನಗರದ 52 ವರ್ಷದ ಮಹಿಳೆ, ತತ್ವದರ್ಶ ಆಸ್ಪತ್ರೆ ಎದುರಿನ ಅಪಾರ್ಟ್ವೆುಂಟ್ನ 55ರ ಪುರುಷ, ಕೃಪಾನಗರದ 23 ವರ್ಷದ ಯುವಕ, ಕೇಶ್ವಾಪುರದ 60 ವರ್ಷದ ಪುರುಷನಿಗೆ, ಹುಬ್ಬಳ್ಳಿಯ 23, 35 ವರ್ಷದ ಯವಕರು 24 ವರ್ಷದ ಯುವತಿ, 6 ವರ್ಷದ ಬಾಲಕಿಗೆ ಸೋಂಕು ತಗುಲಿದೆ.
ಇತರ ತಾಲೂಕು: ಕುಂದಗೋಳ ತಾಲೂಕು ಸಂಶಿ ಗ್ರಾಮದ 29 ವರ್ಷದ ಯುವಕ, ಗುಡಗೇರಿ ತಳವಾರ ಓಣಿಯ 19 ವರ್ಷದ ಯುವತಿ, ತಾಲೂಕು ಆಸ್ಪತ್ರೆಯ 35 ವರ್ಷದ ಯುವತಿ, ಯಲಿವಾಳ ಪ್ಯಾಟಿ ಓಣಿಯ 47 ವರ್ಷದ ಪುರುಷ; ಕಲಘಟಗಿ ತಾಲೂಕು ಮಿಶ್ರಿಕೋಟಿ ಗ್ರಾಮದ 55 ವರ್ಷದ ಪುರುಷ, ಬಿಸರೊಳ್ಳಿ ಗ್ರಾಮದ 30 ವರ್ಷದ ಯುವಕ, ಪೊಲೀಸ್ ಠಾಣೆಯ 36 ವರ್ಷದ ಯುವಕ, ನೆಹರು ನಗರದ 21 ವರ್ಷದ ಯುವತಿ; ಅಣ್ಣಿಗೇರಿ ಪಟ್ಟಣದ 73 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ.
ಇತರ ಜಿಲ್ಲೆಗಳಾದ ಗದಗ ಜಿಮ್ಸ್ನ 36 ವರ್ಷದ ಮಹಿಳೆ, ಲಾಲಬಹಾದ್ದೂರ್ ಕಾಲನಿಯ 80 ವರ್ಷದ ವೃದ್ಧ, ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕು ಇಟಗಿ ಗ್ರಾಮದ 31ರ ಯುವಕ, ಬಳ್ಳಾರಿ ಜಿಲ್ಲೆ ಹೊಸಪೇಟೆಯ 62 ವರ್ಷದ ಮಹಿಳೆ, ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ 50 ವರ್ಷದ ಪುರುಷ ಮತ್ತು ರಾಯಚೂರಿನ 70ರ ವೃದ್ಧನಿಗೆ ಕರೊನಾ ಬಂದಿರುವುದು ದೃಢಪಟ್ಟಿದೆ.
ಕೋವಿಡ್ನಿಂದ 6 ಜನರ ಮರಣ
ಧಾರವಾಡ: ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ 6 ಜನ 4 ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಭಾನುವಾರದ ಪ್ರಕಟಣೆಯಲ್ಲಿ ತಿಳಿಸಿದೆ.
ಧಾರವಾಡ ತಡಸಿನಕೊಪ್ಪದ 34 ವರ್ಷದ ಪುರುಷ, ಹುಬ್ಬಳ್ಳಿ ಜಯಪ್ರಕಾಶನಗರದ 72 ವರ್ಷದ ವೃದ್ಧ, ಆನಂದನಗರದ 49 ವರ್ಷದ ಮಹಿಳೆ, ಸುಳ್ಳ ಗ್ರಾಮದ 48 ವರ್ಷದ ಪುರುಷ, ವಿದ್ಯಾನಗರದ 57 ವರ್ಷದ ಪುರುಷ, ನವಲಗುಂದ ತಾಲೂಕು ಬಸಾಪುರ ಗ್ರಾಮದ 45 ವರ್ಷದ ಪುರುಷ ಮೃತಪಟ್ಟಿದ್ದಾನೆ. ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ, ಕಫ, ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ್ದರು. ನಿಯಮಾನುಸಾರ ಅಂತ್ಯಕ್ರಿಯೆ ಮಾಡಲಾಗಿದೆ.
ಮೂವರು ಪೊಲೀಸರಿಗೆ ವೈರಸ್
ಹುಬ್ಬಳ್ಳಿಯ ಮೂವರು ಪೊಲೀಸರಿಗೆ ಭಾನುವಾರ ಕರೊನಾ ಸೋಂಕು ಧೃಢಪಟ್ಟಿದೆ. ವಿಮಾನ ನಿಲ್ದಾಣದ ಕೈಗಾರಿಕಾ ಭದ್ರತಾ ಪಡೆಯ ಕಾನ್ಸ್ಟೇಬಲ್, ಕಸಬಾಪೇಟ ಹಾಗೂ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ಗೆ ವೈರಸ್ ತಗುಲಿದೆ ಎಂದು ಮೂಲಗಳು ತಿಳಿಸಿವೆ.
ಆರ್ಪಿಎಫ್ನ 11 ಸಿಬ್ಬಂದಿಗೆ ಸೋಂಕು
ಹುಬ್ಬಳ್ಳಿ: ರೈಲ್ವೆ ಭದ್ರತಾ ಪಡೆ (ಆರ್ಪಿಎಫ್) ಸಿಬ್ಬಂದಿಗೆ ಕರೊನಾ ಸೋಂಕು ಬೆಂಬಿಡದೆ ಕಾಡುತ್ತಿದೆ.
ಭಾನುವಾರ ಒಂದೇ ದಿನ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ 11 ಜನ ಆರ್ಪಿಎಫ್ ಸಿಬ್ಬಂದಿಗೆ ಸೋಂಕು ತಗುಲಿದೆ.
ರೈಲ್ವೆ ವಲಯದ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು ತಗುಲಿದ್ದು, ಅರ್ಧಕ್ಕೂ ಹೆಚ್ಚು ಜನ ಗುಣವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.