ದ ರೂಲರ್ಸ್ ಸಂವಿಧಾನದ ಶಕ್ತಿಯ ಪ್ರತಿರೂಪ: ಡಾ. ಸಂದೇಶ್

ದ ರೂಲರ್ಸ್ ಸಂವಿಧಾನದ ಶಕ್ತಿಯ ಪ್ರತಿರೂಪ: ಡಾ. ಸಂದೇಶ್
Published on

ಹಾಸನ: ದಿ ರೂಲರ್ಸ್ ಸಂವಿಧಾನದ ಶಕ್ತಿಯ ಪ್ರತಿರೂಪವಾಗಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಚಿತ್ರ ದಿ ರೂಲರ್ಸ್ ಕುಟುಂಬ ಸಮೇತರಾಗಿ ನೋಡುವ ಚಿತ್ರವಾಗಿದೆ ಎಂದು ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಹಾಗೂ ಚಿತ್ರದ ನಟ ಡಾ.ಸಂದೇಶ್ ಹೇಳಿದರು.
ನಗರದ ಪೃಥ್ವಿ ಚಿತ್ರ ಮಂದಿರದಲ್ಲಿ ಸೋಮಾವಾರ ಅಂಬೇಡ್ಕರ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸಾತೇನಹಳ್ಳಿ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ದಿ ರೂಲರ್ಸ್ ತ್ರದ ಪ್ರಚಾರ ಕಾರ್ಯಚಿಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ರಾಜ್ಯಾದ್ಯಂತ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಬಹುಜನರ ಮೆಚ್ಚುಗೆಗೆ ಪಾತ್ರವಾಗಿದೆ.ಜಿಲ್ಲೆಯಲ್ಲೂ ಪ್ರತಿಯೊಬ್ಬರೂ ಜಾತ್ಯತೀತವಾಗಿ ಚಿತ್ರವನ್ನು ವೀಕ್ಷಿಸಿ ಚಿತ್ರತಂಡವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಅಂಬೇಡ್ಕರ್ ಒಂದು ಜಾತಿ, ಅಥವಾ ಒಂದು ಸಮುದಾಯಕ್ಕೆ ಸೀಮಿತವಲ್ಲ,ಅವರ ಪರ ಕೂಗುವ ಘೋಷಣೆಯನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಎಸ್ಟು ಸರಿ ಎಂದು ಪ್ರಶ್ನಿಸಿದರು. ವಿಶ್ವಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ಹೆಸರು ಇರುವವರೆಗೂ ಜೈ ಭೀಮ್ ಘೋಷಣೆ ಇದ್ದೆ ಇರುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬಿ.ಎಲ್ ರಾಮಸ್ವಾಮಿ ಅವರು ಮಾತನಾಡಿ, ವಿಶ್ವಕ್ಕೆ ಸರ್ವ ಶ್ರೇಷ್ಠ ಸಂವಿಧಾನ ನೀಡಿದ ಡಾ. ಅಂಬೇಡ್ಕರ್ ಜೀವನಾಧಾರಿತ ಚಿತ್ರವನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ವೀಕ್ಷಿಸಲು ಅವಕಾಶ ಕಲ್ಪಿಸಬೇಕು, ಪ್ರಜಾಪ್ರಭುತ್ವಕ್ಕೆ ಶಕ್ತಿ ಬರಲು ಭಾರತೀಯ ಸಂವಿಧಾನವನ್ನು ಪ್ರತಿಯೊಬ್ಬರೂ ಓದಬೇಕು, ಹಾಗೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸಾತೇನಹಳ್ಳಿ ಶಿವ ಕುಮಾರ್, ಹಿರಿಯ ದಲಿತ ಹೋರಾಟಗಾರ ಅಂಬುಗ ಮಲ್ಲೇಶ್, ಮುಖಂಡರಾದ ಮಂಜುನಾಥ್, ರಘು, ಮಧು, ಶರತ್, ನವೀನ್ ಗಿಣಿಯಪ್ಪ, ಬಿಎಸ್ಪಿ ಮಹಿಳಾ ಘಟಕದ ಅಧ್ಯಕ್ಷೆ ಶಿವಮ್ಮ. ಭಾಗ್ಯ ಕಲಿವೀರ್. ಕುಮಾರಸ್ವಾಮಿ, ಶಶಿಧರ್ ಮೌರ್ಯ, ತೊಟೆಷ್. ಅಶೋಕ್ ನಾಯಕರಹಳ್ಳಿ, ಬಿ.ಎಂ ರಾಮಸ್ವಾಮಿ, ಸುಧಾಕರ್, ಕಬ್ಬಳಿ ಸತೀಶ್,ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net