ದ.ರಾ. ಬೇಂದ್ರೆ ಜನಮಾನಸದಿಂದ ಮರೆಯಾಗದ ವರಕವಿ : ಪ್ರೊ.ಬಿ.ಬಿ ಪಾಟೀಲ

18GDG09
Published on

ಗದಗ: ಮಾನವನ ಬದುಕಿಗೆ ಹತ್ತಿರವಿರುವ, ಸಾಮಾನ್ಯರೂ ಓದಿ ತಿಳಿದುಕೊಳ್ಳಬಲ್ಲ ಕಾವ್ಯ ರಚಿಸಿದ ದ. ರಾ. ಬೇಂದ್ರೆಯವರು ಜನಮಾನಸದಿಂದ ಮರೆಯಾಗದ ವರಕವಿಗಳು ಎಂದು ಹುಲಕೋಟಿ ಸಹಕಾರಿ ಶಿಣ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ. ಬಿ.ಬಿ ಪಾಟೀಲ ಹೇಳಿದರು.
ಇತ್ತೀಚೆಗೆ ನಗರದ ಆಧ್ಯಾತ್ಮಿಕ ಚಿಂತನ ಬಳಗದಲ್ಲಿ ಏರ್ಪಡಿಸಿದ್ದ 35ನೇ ಮನದಾಳದ ಮಾತು ಕಾರ್ಯಕ್ರಮದಲ್ಲಿ ವರಕವಿ ದ.ರಾ ಬೇಂದ್ರೆ ಬದುಕು ಬರಹದ ಕುರಿತು ಉಪನ್ಯಾಸ ನೀಡಿ, ಮರಾಠಿಗರಾಗಿದ್ದ ಬೇಂದ್ರೆ ಪುಣೆಯಲ್ಲಿ ಶಿಣ ಪಡೆದರೂ ಧಾರವಾಡದ ಸಾಧನಕೇರಿಗೆ ಆಗಮಿಸಿದಾಗ ಕನ್ನಡವೇ ಅವರ ಬದುಕಾಯಿತು. ವಿ.ಕೆ ಗೋಕಾಕ, ರಂ.ಶ್ರೀ ಮುಗಳಿ ಹಾಗೂ ಶಂ.ಭಾ ಜೋಶಿ ಜೊತೆಗೂಡಿ ಸ್ವಾತಂತ್ರೋತ್ಸ ಗೆಳೆಯರ ಬಳಗ ಸ್ಥಾಪಿಸಿಕೊಂಡಿದ್ದರು. ಅವರು ಮಾನವ ಸಹಜ ಗುಣಗಳ ಮೇಲೆ ರಚಿಸಿದ ಕಾವ್ಯಗಳು ಎಂದಿಗೂ ಪ್ರಸ್ತುತವಾಗಿವೆ. ಸಮಾಜ ಪರಿವರ್ತನೆಗೂ ಕಾರಣವಾಗಬಲ್ಲ ಸಾಹಿತ್ಯವನ್ನು ಬೇಂದ್ರೆ ರಚಿಸಿದ್ದು, ಕನ್ನಡಿಗರಿಗೆ ಸಾರ್ವಕಾಲಿಕ ಸ್ಪೂತಿರ್ಯ ಸೆಲೆಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯತೆ ವಹಿಸಿದ್ದ ಸಂಟನೆಯ ಅಧ್ಯ ಸಿ.ಆರ್​ ಗಡಾದ ಮಾತನಾಡಿ, ದ.ರಾ ಬೇಂದ್ರೆಯವರು ನಾಡಿನ ಅಪರೂಪದ ಕವಿ. ಅವರ ಬದುಕು&ಬರಹಗಳು ನಾಡಿಗೆ ಅಮೂಲ್ಯ ಕೊಡುಗೆಯಾಗಿದ್ದು, "ನಾನು ಇರುವವರೆಗೂ ಸಾವು ಬರುವುದಿಲ್ಲ, ಅದು ಬಂದಾಗ ನಾನು ಇರುವುದಿಲ್ಲ ಆದ್ದರಿಂದ ನಾನು ಸಾವಿಗೆ ಹೆದರುವುದಿಲ್ಲ' ಎನ್ನುವ ಮೂಲಕ ನಮ್ಮಲ್ಲಿ ಜೀವನೋತ್ಸಾಹ ತುಂಬಿದ ಕವಿಗಳಾಗಿದ್ದರು ಎಂದರು.
ಶ್ರೀನಿವಾಸ ಕುಲಕಣಿರ್ ಮತ್ತು ಗಣೇಶಗೌಡ ಪಾಟೀಲ ಬೇಂದ್ರೆ ಕವಿತೆಗಳನ್ನು ವಾಚಿಸಿದರು. ಡಾ. ಗಣೇಶ ಸುಲ್ತಾನಪೂರ, ಕೆ. ಎಚ್​. ಬೇಲೂರು, ಬಿ. ಎಂ. ಬಿಳೆಯಲಿ, ಶರಣಪ್ಪ ಹೊಸಂಗಡಿ, ಮಂಜಪ್ಪ ಶಿರಹಟ್ಟಿ ಸೇರಿದಂತೆ ಸಾಹಿತ್ಯಾಸಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net