ದ.ರಾ. ಬೇಂದ್ರೆ ಕಾವ್ಯಾನುಭವ ಸೆ.11ರಂದು

9HNL1
Published on

ಹಾನಗಲ್ಲ: ಪಟ್ಟಣದ ಕುಮಾರೇಶ್ವರ ಬಿಇ.ಡಿ ಕಾಲೇಜ್​ನಲ್ಲಿ ಸೆ. 11ರಂದು ಸಂಜೆ ಬೇಂದ್ರೆ ಕಾವ್ಯಾನುಭವ ಕಾರ್ಯಕ್ರಮ ಸೆ. 11ರಂದು ಜರುಗಲಿದೆ.

ಭಾನುವಾರ ಸಂಜೆ 4 ಗಂಟೆಗೆ ಭಾರತೀಯ ವೈದ್ಯಕೀಯ ಸಂಘದ ಹಾನಗಲ್ಲ ಘಟಕ, ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಐಎಂಎ ತಾಲೂಕು ಘಟಕದ ಅಧ್ಯಕ್ಷ ಡಾ. ಎನ್.ಆರ್. ದೇಶಪಾಂಡೆ ಅಧ್ಯಕ್ಷತೆ ವಹಿಸುವರು. ಸಾಹಿತಿ ಡಾ. ಶಾಮಸುಂದರ ಬಿದರಕುಂದಿ, ಬೇಂದ್ರೆ ಅವರ ಜೀವನ ಮತ್ತು ಕಾವ್ಯ ವಿಷಯ ಕುರಿತು ಉಪನ್ಯಾಸ ನೀಡುವರು.

ಧಾರವಾಡದ ಕಲಾವಿದ ಅನಂತ ದೇಶಪಾಂಡೆ, ಅಳ್ನಾವರದ ಮುಕುಂದ ಕುಲಕರ್ಣಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಸಾಪ ನಗರ ಘಟಕದ ಅಧ್ಯಕ್ಷ ಡಾ. ವಿಶ್ವನಾಥ ಬೊಂದಾಡೆ, ಡಾ. ದತ್ತಾತ್ರೇಯ ಕುಲಕರ್ಣಿ, ಶಿಕ್ಷಕ ದಾವಲ್​ವುಲ್ಲಿಕ್ ಉಪಸ್ಥಿತರಿರುವರು. ನಂತರ ನಡೆಯುವ ಕಾವ್ಯ-ಗಾಯನ-ಕುಂಚ ಕಾರ್ಯಕ್ರಮದಲ್ಲಿ ಚಿತ್ರ ಕಲಾವಿದ ಜಿ.ಎಸ್. ಗಾಂವ್ಕರ್ ಹಾಗೂ ಸಂಗೀತ ಕಲಾವಿದ ನರಸಿಂಹ ಕೋಮಾರ ಮತ್ತು ತಾಳಿಕೋಟೆಯ ಶೇಷಾಚಲ ಹವಾಲ್ದಾರ್ ಅವರು ಬೇಂದ್ರೆ ಅವರ ಗೀತೆಗಳನ್ನು ಪ್ರಸ್ತುತಪಡಿಸುವರು. ಇದೇ ಸಂದರ್ಭದಲ್ಲಿ ದ.ರಾ. ಬೇಂದ್ರೆ ಅವರ ಕುರಿತು ಅತಿಥಿಗಳೊಂದಿಗೆ ಸ್ಪಂದನೆ- ಪ್ರತಿಕ್ರಿಯೆ- ಸಂವಾದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net