ದ.ಕ.ದಲ್ಲಿ 790, ಉಡುಪಿಯಲ್ಲಿ 159 ಸೋಂಕಿತರು, ಮರಣ ಸಂಖ್ಯೆಯಲ್ಲಿ ಏರಿಕೆ

covid
Published on

ಮಂಗಳೂರು/ಉಡುಪಿ: ದ.ಕ ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆ ಮೇಲ್ಮುಖವಾಗಿಯೇ ಮುಂದುವರಿಯುತ್ತಿದೆ. ಬುಧವಾರ ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 790 ಮಂದಿ ಕೋವಿಡ್ ಪಾಸಿಟಿವ್ ಆಗಿದ್ದಾರೆ. 966 ಮಂದಿ ಬುಧವಾರ ಡಿಸ್‌ಚಾರ್ಜ್ ಆಗಿದ್ದಾರೆ. ಒಟ್ಟು ಪಾಸಿಟಿವ್ ಸಂಖ್ಯೆ 85,665ಕ್ಕೆ ಏರಿದ್ದರೆ 6,594 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯ ಪಾಸಿಟಿವಿಟಿ ದರ ಇನ್ನೂ ಶೇಕಡ 8.28ರಲ್ಲಿದೆ.

ಉಡುಪಿ ಜಿಲ್ಲೆಯಲ್ಲಿ ಬುಧವಾರ 159 ಮಂದಿಗೆ ಕರೊನಾ ದೃಢಪಟ್ಟಿದೆ. ಇಬ್ಬರು ಸಾವನ್ನಪ್ಪಿದ್ದಾರೆ. ಉಡುಪಿಯಲ್ಲಿ 75 ವರ್ಷದ ಮಹಿಳೆ ಹಾಗೂ ಕಾರ್ಕಳದಲ್ಲಿ 89 ವರ್ಷದ ಮಹಿಳೆ ಮೃತರಾಗಿದ್ದಾರೆ. ಸೋಂಕಿತರಲ್ಲಿ 58 ಮಂದಿ ಉಡುಪಿ, 47 ಮಂದಿ ಕುಂದಾಪುರ, 50 ಮಂದಿ ಕಾರ್ಕಳ ತಾಲೂಕಿನವರಿದ್ದಾರೆ. ನಾಲ್ವರು ಹೊರ ಜಿಲ್ಲೆಯವರು. ಇವರಲ್ಲಿ 70 ಮಂದಿ ರೋಗ ಲಕ್ಷಣ ಹೊಂದಿದ್ದಾರೆ. 22 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ 137 ಮಂದಿ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 372 ಮಂದಿ ಗುಣವಾಗಿದ್ದಾರೆ. 2468 ಸಕ್ರಿಯ ಪ್ರಕರಣಗಳಿವೆ.

ಕಪ್ಪು ಶಿಲೀಂಧ್ರ ಪ್ರಕರಣ ಇಬ್ಬರು ಆಸ್ಪತ್ರೆಗೆ: ದ.ಕ ಜಿಲ್ಲೆಯ ಇಬ್ಬರು ರೋಗಿಗಳು ಬ್ಲಾಕ್ ಫಂಗಸ್ ಸಮಸ್ಯೆಯೊಂದಿಗೆ ಆಸ್ಪತ್ರೆಗೆ ಬುಧವಾರ ದಾಖಲಾಗಿದ್ದಾರೆ. ಇದರೊಂದಿಗೆ ಬ್ಲಾೃಕ್ ಫಂಗಸ್ ಸಕ್ರಿಯ ಪ್ರಕರಣಗಳು 40 ತಲಪಿವೆ. ಇದರಲ್ಲಿ ದ.ಕ ಜಿಲ್ಲೆಯ 9 ಹೊರ ಜಿಲ್ಲೆಯ 31 ಸೇರಿವೆ. ಉಡುಪಿಯಲ್ಲಿ ಬುಧವಾರ ಕಪ್ಪು ಶಿಲೀಂಧ್ರ ಪ್ರಕರಣಗಳಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net