ಥ್ರೋಬಾಲ್‌ನಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆ

14 mlv 1
Published on

ಮಳವಳ್ಳಿ: ಮಂಡ್ಯದ ಪಿಇಎಸ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮಳವಳ್ಳಿ ತಾಲೂಕಿನ ಬೆಳಕವಾಡಿ ಸಾರ್ವಜನಿಕ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಥ್ರೋಬಾಲ್ ಪ್ರಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗಿಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ತಂಡದ ವಿದ್ಯಾರ್ಥಿನಿಯರಾದ ಸ್ನೇಹ, ಚೈತ್ರ, ಪಲ್ಲವಿ, ವರ್ಷ, ಎಲ್.ಎನ್.ಪಲ್ಲವಿ, ಐಶ್ವರ್ಯ, ಕೀರ್ತನ, ಚಂದನ, ರೋಹಿಣಿ, ಅರ್ಪಿತ, ಮೋನಿಕ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜು ಅವರನ್ನು ಶಾಲಾ ಆಡಳಿತ ಮಂಡಳಿಯಿಂದ ಅಭಿನಂದಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಕಾರ್ಯದರ್ಶಿ ಮಾದಶೆಟ್ಟಿ, ಮುಖ್ಯ ಶಿಕ್ಷಕ ದೇವರಾಜು, ಸಹ ಶಿಕ್ಷರಾದ ಸೋಮಶೇಖರ್, ಉಮಾಶಂಕರ್, ಚಿಕ್ಕನಾಯಕ, ಅಭಿಲಾಷ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net