ತ್ವರಿತ ಪರಿಹಾರಕ್ಕೆ ಒತ್ತಾಯ

25CBP4 (1)
Published on

ಚಿಕ್ಕಬಳ್ಳಾಪುರ : ಕ್ಷೌರಿಕರ ಬ್ಯಾಂಕ್ ಖಾತೆಗೆ ಸರ್ಕಾರದ ಪರಿಹಾರ ಹಣವನ್ನು ತ್ವರಿತವಾಗಿ ಜಮಾ ಮಾಡಲು ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.

ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಆರ್.ವರಲಕ್ಷ್ಮೀ ಮೂಲಕ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿದ ಗೌರಿಬಿದನೂರು ತಾಲೂಕು ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಡಿ.ಶಿವಕುಮಾರ್ ಕರೊನಾ ಾಕ್ ಡೌನ್ ಹಿನ್ನೆಲೆಯಲ್ಲಿ ಕ್ಷೌರಿಕರು ಕೆಲಸವಿಲ್ಲದೇ ನಷ್ಟ ಅನುಭವಿಸಿದನ್ನರಿತು ಸರ್ಕಾರ 5 ಸಾವಿರ ರೂ. ಪರಿಹಾರ ಘೋಷಿಸಿದೆ. ಇದಕ್ಕೆ ಹಲವರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಬಹುತೇಕರಿಗೆ ನೆರವು ಸಿಕ್ಕಿಲ್ಲ. ಬ್ಯಾಂಕ್ ಖಾತೆಗೆ ಜಮಾಗೊಳಿಸುವ ನೆಪದಲ್ಲಿ ಕಾಲಹರಣ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೌರಿಬಿದನೂರು ತಾಲೂಕಿನ ಸಂಘದ ಸಹ ಕಾರ್ಯದರ್ಶಿ ಎನ್.ಸತೀಶ್, ಸಂಚಾಲಕ ಜಿ.ರಾಘವೇಂದ್ರ, ಚಿಕ್ಕಬಳ್ಳಾಪುರ ಪ್ರತಿನಿಧಿಗಳಾದ ಬಿ.ಎಂ.ಮಂಜುನಾಥ್, ಎನ್.ವೆಂಕಟೇಶ್, ತೊಂಡೇಬಾವಿ ಹೋಬಳಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಮಂಚೇನಹಳ್ಳಿ ಹೋಬಳಿ ಅಧ್ಯಕ್ಷ ಎಂ.ಎನ್.ಸುರೇಶ್, ಮುಖಂಡ ಎಸ್.ನಟರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net