

ವಿಜಯಪುರ : ನಗರದ ಬಿಎಲ್ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ನಿರ್ವಹಣಾ ಅಧ್ಯಯನ ವಿಭಾಗದ ವತಿಯಿಂದ ಸೋಮವಾರ ತ್ರಿಶೂಲ್&2025 ಎಂಬ ಕಾರ್ಯಕ್ರಮದಡಿ ನಿರ್ವಹಣೆಯ ನಾವೀನ್ಯತೆ, ಚೈತನ್ಯ ಮತ್ತು ಶಕ್ತಿಯನ್ನು ಪೂರೈಸುವ ಸ್ಥಳ, ಇಂಟರ್ಕಾಲೇಜಿಯೇಟ್ ಮೆಗಾ ಮ್ಯಾನೇಜ್ಮೆಂಟ್ ಮೀಟ್ ನಡೆಯಿತು.
ಕಾರ್ಯಕ್ರಮವನ್ನು ಕಾರ್ಯತಂತ್ರದ ನಿರ್ವಹಣೆ ಸೃಜನಶೀಲತೆಯವರೆಗೆ, ಬುದ್ಧಿಶಕ್ತಿಯಿಂದ ಶಕ್ತಿಯವರೆಗೆ ಅನ್ವೇಷಿಸಲಾಗಿದೆ. ಸ್ಥಳಿಯ 15ಕ್ಕೂ ಅಧಿಕ ಪದವಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದು ವಿದ್ಯಾರ್ಥಿಗಳಲ್ಲಿ ನಿರ್ವಹಣಾ ಪ್ರತಿಭೆ ಸೃಷ್ಟಿಸುತ್ತದೆ ಮತ್ತು ಅನ್ವೇಷಿಸಲು, ವಿಶ್ಲೇಷಿಸಲು, ಮರುಕಲ್ಪನೆ ಮಾಡಲು ಮತ್ತು ನಿರ್ವಹಿಸಲು ಅವರಿಗೆ ಸಹಾಯ ಮಾಡಲಿದೆ.
ಸಂಸ್ಥೆಯ ಆಡಳಿತಾಧಿಕಾರಿ ವಿ.ಎಸ್. ಬಗಲಿ ಉದ್ಘಾಟಿಸಿದರು. ಪ್ರಾಚಾರ್ಯ ಡಾ. ಮಂಜುನಾಥ ಪಿ., ಡಾ. ಲೀನಾ ರಾಘಾ, ವಿಭಾಗದ ಮುಖ್ಯಸ್ಥ ಜಿ.ಎಸ್. ಕರಡಿ ಮತ್ತಿತರರಿದ್ದರು.
ವಿಜಯಪುರದ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡ ತ್ರಿಶೂಲ್&2025 ಕಾರ್ಯಕ್ರಮವನ್ನು ವಿ.ಎಸ್. ಬಗಲಿ ಉದ್ಘಾಟಿಸಿದರು. ಡಾ. ಮಂಜುನಾಥ ಪಿ., ಡಾ. ಲೀನಾ ರಾಘಾ, ಜಿ.ಎಸ್. ಕರಡಿ ಮತ್ತಿತರರಿದ್ದಾರೆ.
**