ತ್ರಿವಿಧ ದಾಸೋಹದಿಂದ ಜನತೆಗೆ ಹತ್ತಿರ

Kabeer
Published on

ಚಿತ್ರದುರ್ಗ: ಅನ್ನ, ಜ್ಞಾನ, ಧರ್ಮದ ಭೋದನೆಯೊಂದಿಗೆ ತ್ರಿವಿಧ ದಾಸೋಹದಲ್ಲಿ ತೊಡಗಿರುವ ಶಿವಲಿಂಗಾನಂದ ಶ್ರೀ ಜನತೆಗೆ ಹತ್ತಿರವಾಗುತ್ತಿದ್ದಾರೆ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ಕಬೀರಾನಂದಾಶ್ರಮದ ಶಿವಲಿಂಗಾನಂದ ಶ್ರೀಗಳ ಜನ್ಮದಿನದ ಅಂಗವಾಗಿ ಗುರುವಾರ ನಡೆದ ಸಮಾರಂಭದಲ್ಲಿ ಮಾತನಾಡಿ, ಚಿತ್ರದುರ್ಗದಲ್ಲಿ ಗೋಶಾಲೆ ಆರಂಭಿಸಿ ಗೋವುಗಳ ರಕ್ಷಣೆಗೆ ಮುಂದಾಗಿರುವ ಅವರ ಸಾಮಾಜಿಕ ಕಳಕಳಿ ಅವಿಸ್ಮರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆದಿಚುಂಚನಗಿರಿಯ ಶಂಬುನಾಥ ಶ್ರೀ, ಶಿವಪುತ್ರ ಶ್ರೀ, ಪುರುಷೋತ್ತಮಾನಂದ ಶ್ರೀ, ಶಿವಲಿಂಗಾನಂದ ಶ್ರೀ, ವಿಸ್ಮಯ ಟ್ರಸ್ಟ್‌ನ ಆನಂತ ಗೂರುಜಿ, ಮುಖಂಡರಾದ ರುದ್ರಮುನಿ, ಕೆಇಬಿ ಷಣ್ಮುಖಪ್ಪ, ಗೋಪಾಲಸ್ವಾಮಿ ನಾಯಕ, ಕುಮಾರ್‌ಗೌಡ, ನಗರಸಭೆ ಸದಸ್ಯೆ ಪೂಜಾ ಮಂಜುನಾಥ್, ಚಂದ್ರಶೇಖರಯ್ಯ, ಬಿಜೆಪಿ ಮುಖಂಡ ಅನಿತ್‌ಕುಮಾರ್, ಗೋವಿಂದಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net