ತ್ರಿವಳಿ ಮಕ್ಕಳ ಜನನ

6hos2p
Published on

ಹೊಸನಗರ: ತಾಲೂಕಿನ ಮಾರುತಿಪುರ ಸಮೀಪದ ಸೋಗೋಡು ನಿವಾಸಿ ವಸಂತ್​ಕುಮಾರ್ ಎಂಬುವರ ಪತ್ನಿ ಶ್ರೀಲತಾ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಾಮಾನ್ಯ ಹೆರಿಗೆ ಮೂಲಕ ಎರಡು ಹೆಣ್ಣು ಹಾಗೂ ಒಂದು ಗಂಡು ಮಗು ಜನಿಸಿರುವುದು ವಿಶೇಷ. ಹೆಣ್ಣು ಮಕ್ಕಳು 1.600 ಕೆಜಿ ಹಾಗೂ ಗಂಡು ಮಗು 1.750 ಕೆಜಿ ತೂಕವಿದೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇದು 2ನೇ ಹೆರಿಗೆಯಾಗಿದ್ದು ಈ ಮೊದಲು ದಂಪತಿಗೆ ಒಬ್ಬಳು ಮಗಳಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net