

ಕವಿತಾಳ: ಪಟ್ಟಣದ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಭಾನುವಾರ ಯುಗಾದಿಯನ್ನು ಸಡಗರದಿಂದ ಆಚರಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವು ಮುಕ್ಕಣ್ಣನ ಲಿಂಗುಗಳ ಮೇಲೆ ಸೂರ್ಯ ಕಿರಣಗಳು ಬೀಳುವುದನ್ನು ಭಕ್ತರು ಕಣ್ಣು ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುವಾಗ ಸೂರ್ಯ ರಶ್ಮಿ ಲಿಂಗುಗಳನ್ನು ಸ್ಪರ್ಶಿಸಿತು.
ದೇವಸ್ಥಾನ ಅರ್ಚಕ ಸಿದ್ದಯ್ಯಸ್ವಾಮಿ ಮಾತನಾಡಿ, ಇತಿಹಾಸಲ್ಲಿಯೇ ಇಲ್ಲಿನ ತ್ರಯಂಬಕೇಶ್ವರ ದೇವಸ್ಥಾನ ಪ್ರಸಿದ್ಧಿ ಪಡೆದಿದೆ. ಭಕ್ತರಿಗೆ ಬೇಡಿದ ವರವನ್ನು ಕೊಡುವ ಭಕ್ತರು ಎನ್ನುವ ನಂಬಿಕೆಯಿದ್ದು, ಇಂದು ಯುಗಾದಿ ಹಬ್ಬದ ಅಂಗವಾಗಿ ತ್ರಯಂಬಕೇಶ್ವರ ದೇವರಿಗೆ ಸೂರ್ಯ ಕಿರಣಗಳು ಬೀಳುವುದು ನೋಡುವುದೇ ಭಾಗ್ಯವಾಗಿದೆ ಎಂದರು.