ತ್ಯಾಜ್ಯಮುಕ್ತ ಗ್ರಾಮಕ್ಕೆ ಪಣ ತೊಡಿ

14ydg02
Published on

ಯಾದಗಿರಿ: ಗ್ರಾಮದ ಪ್ರತಿ ಮನೆಗಳಿಂದ ನಿತ್ಯ ಸಂಗ್ರಹವಾಗುವ ಕಸವನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ಸಂಸ್ಕರಿಸಿ, ವಿಲೆವಾರಿ ಮಾಡುವ ಮೂಲಕ ತ್ಯಾಜ್ಯ ಮುಕ್ತ ಗ್ರಾಮವನ್ನಾಗಿ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಾಪಂ ಇಒ ಬಸವರಾಜ ಶರಬೈ ಸಲಹೆ ನೀಡಿದರು.

ಗುರುವಾರ ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣೆ ಚಟುವಟಿಕೆ ಪರಿಶೀಲಿಸಲು ಗ್ರಾಪಂಗಳಲ್ಲಿ ರಚಿಸಿದ ಸಮಿತಿಗಳ ಸದಸ್ಯರಿಗೆ ಆಯೋಜಿಸಿದ್ದ ಕಾಯರ್ಾಗಾರ ಉದ್ಘಾಟಿಸಿ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಗ್ರಾಮಗಳಲ್ಲಿ ಸ್ವಚ್ಛ ನೈರ್ಮಲ್ಯ ಕಾಪಾಡಿ ಸುಂದರ ಜಿಲ್ಲೆಯನ್ನಾಗಿಸುವ ದೃಷ್ಟಿಯಿಂದ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಘನ ತ್ಯಾಜ್ಯವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕಾದ ಅಗತ್ಯವಿದೆ ಎಂದರು.

ಗ್ರಾಪಂ ಮಟ್ಟದ ಸಂಜೀವಿನಿ ಮಹಿಳಾ ಸ್ವ ಸಹಾಯ ಒಕ್ಕೂಟಗಳೊಂದಿಗೆ ಘನ ತ್ಯಾಜ್ಯ, ನರ್ಿವಹಣೆ ಹಾಗೂ ವಿಲೇವಾರಿ ಮಾಡಲು ಮಾಡಿಕೊಂಡ ಒಪ್ಪಂದಕ್ಕೆ ಒಳಪಟ್ಟು ಸ್ವ-ಸಹಾಯ ಸಂಘದ ಸದಸ್ಯರು, ಸ್ವಚ್ಛತಾ ವಾಹಿನಿ ಮೂಲಕ ಪ್ರತಿ ದಿನ ಪ್ರತಿ ಗ್ರಾಮದ ವಾಡರ್್ಗಳಲ್ಲಿ ಸಂಚರಿಸಿ ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ನಿಗದಿತ ಒಪ್ಪಂದಂತೆ ಗ್ರಾಮದ ಪ್ರತಿ ಮನೆಯಿಂದ ಹಸಿ ಹಾಗೂ ಕಸ ಸಂಗ್ರಹಿಸಬೇಕು. ಅದನ್ನು ಸಂಸ್ಕರಿಸುವ ಮೂಲಕ ವಿಲೇವಾರಿ ಮಾಡಬೇಕು ಹಾಗೂ ಅದರಿಂದ ಬರುವ ಆದಾಯ, ಮಾರಾಟ ಕ್ರಮ ಸೇರಿ ಇತರೆ ವಿಷಯಗಳ ಕುರಿತು ನಡೆಯುವ ತರಬೇತಿಯ ಸದುಪಯೋಗ ಪಡೆದುಕೊಂಡು ಆದಾಯದ ಉದ್ಯಮವನ್ನಾಗಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net