ತ್ಯಾಜ್ಯ ಸಂಸ್ಕರಣೆ ಪರಿಶೀಲನೆ

rajanna visit
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪಾಲಿಕೆಯ ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ನಗರದ ಕಾರವಾರ ರಸ್ತೆಯ ಡಂಪಿಂಗ್ ಯಾರ್ಡ್​ಗೆ ಶನಿವಾರ ಭೇಟಿ ನೀಡಿ ತ್ಯಾಜ್ಯ ಸಂಸ್ಕರಣೆಯ ವಿಧಾನಗಳನ್ನು ಪರಿಶೀಲಿಸಿದರು.

ಇಲ್ಲಿ ಹಲವು ದಶಕಗಳಿಂದ ಡಂಪ್ ಮಾಡಿರುವ ಪಾರಂಪರಿಕ ತ್ಯಾಜ್ಯವನ್ನು ಕರಗಿಸಲು ಅಳವಡಿಸಿರುವ ಯಂತ್ರೋಪಕರಣಗಳ ಕಾರ್ಯವಿಧಾನವನ್ನು ತಿಳಿದುಕೊಂಡರು. ಈ ಯೋಚನೆಯನ್ನು ಕರಾರು ಅನುಸಾರ ಅಂತಿಮಗೊಳಿಸಲು ಹಾಗೂ ಲ್ಯಾಂಡ್ ರೆಕ್ಲಮೇಷನ್ ಅನ್ನು ಶೇ. 100ರಷ್ಟು ಸಾಧಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಇಂದಿರಾನಗರ ಕಾಂಪ್ಯಾಕ್ಟರ್ ಸ್ಟೇಷನ್​ಗೆ ಭೇಟಿ ನೀಡಿದ ಅವರು, ಸುತ್ತಮುತ್ತಲಿನ ಸುಮಾರು 15 ವಾರ್ಡ್​ಗಳಿಂದ ಆಟೋ ಟಿಪ್ಪರ್ ವಾಹನಗಳ ಮೂಲಕ ಸಂಗ್ರಹವಾಗುವ ಹಸಿ ಹಾಗೂ ಒಣ ಕಸವನ್ನು ಇಲ್ಲಿಂದ ಹೆಚ್ಚಿನ ಸಾಮರ್ಥ್ಯದ ಕಾಂಪ್ಯಾಕ್ಟರ್ ಕಂಟೇನರ್​ಗಳಲ್ಲಿ ಸಾಗಿಸುವ ವಿಧಾನವನ್ನು ಪರಿಶೀಲಿಸಿದರು. ಪಡದಯ್ಯನಹಕ್ಕಲ್ ವಧಾಲಯಕ್ಕೆ ಭೇಟಿ ನೀಡಿ, ಅವುಗಳ ನಿರ್ವಹಣೆಗೆ ಹಂತ ಹಂತವಾಗಿ ತೆಗೆದುಕೊಳ್ಳುವ ಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಆಧುನಿಕ ವಧಾಲಯಗಳ ನಿರ್ವಣದ ಬಗ್ಗೆ ಈ ಸಂದರ್ಭದಲ್ಲಿ ರ್ಚಚಿಸಲಾಯಿತು.

ಸಮಿತಿ ಸದಸ್ಯರಾದ ಮಹದೇವಪ್ಪ ನರಗುಂದ, ಚಂದ್ರಕಲಾ ಕೋಟಬಾಗಿ, ಮೊಹಮ್ಮದ್ ಇಕ್ಬಾಲ್ ನವಲೂರು, ಸುಮಿತ್ರಾ ಗುಂಜಾಳ, ಫಮೀದಾ ಕಾರಡಗಿ, ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ್, ಇಇ ಮಲ್ಲಿಕಾರ್ಜುನ ಬಿ. ಎಂ., ಪಶುವೈದ್ಯಾಧಿಕಾರಿ ಎ. ಜಿ. ಕುಲಕರ್ಣಿ, ವಲಯ ಅಧಿಕಾರಿಗಳಾದ ಮನೋಜ ಗಿರೀಶ, ಪರಿಸರ ಅಭಿಯಂತರರಾದ ನಯನಾ ಕೆ. ಎಸ್., ಯುವರಾಜ್ ಕೆ. ಆರ್, ಆರೋಗ್ಯ ನಿರೀಕ್ಷಕಿ ದೀಪಿಕಾ ಆರ್., ಜ್ಯೋತಿ ನರೇಂದ್ರ, ಸ್ಥಳೀಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net