ತ್ಯಾಜ್ಯ ವಿಲೇ ಮಾಡಿದ ನೌಕರರು

22CBP2
Published on

ಚಿಕ್ಕಬಳ್ಳಾಪುರ : ಕೆಲಸದ ಒತ್ತಡದಲ್ಲಿ ತೊಡಗಿದ್ದ ನೌಕರರು ಮತ್ತು ಸ್ವಯಂ ಸೇವಕರು ತಾಲೂಕಿನ ಕೇತೇನಹಳ್ಳಿ ಬಳಿ ಇರುವ ವಿವೇಕಾನಂದ ಜಲಾಶಯದ ಬಳಿ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಗಮನ ಸೆಳೆದರು. ಇದಕ್ಕೆ ಪರಿಸರ ಪ್ರೇಮಿಗಳು ಮತ್ತು ಸ್ಥಳೀಯರು ಸಾಥ್ ನೀಡಿದರು. ಹಲವು ವರ್ಷಗಳಿಂದ ಪ್ರವಾಸಿ ತಾಣದ ವಿವಿಧೆಡೆ ಬಿದ್ದಿದ್ದ ಪ್ಲಾಸ್ಟಿಕ್, ಕಲ್ಲು ಮಣ್ಣು, ಪೇಪರ್ಸ್‌, ಬಾಟಲಿ ಸೇರಿ ತ್ಯಾಜ್ಯ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸಿದರು.

ಜಿಲ್ಲಾ ಅರಣ್ಯಾಧಿಕಾರಿ ಅಸಲನ್ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಜೀವ ಸಂಕುಲದ ಉಳಿವು ಪ್ರಕೃತಿಯ ಬೆಳವಣಿಗೆಯನ್ನು ಅವಲಂಬಿಸಿದೆ. ಆದರೆ, ಇದರ ಅರಿವಿದ್ದರೂ ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯಲಾಗುತ್ತಿದೆ. ವಾಯು, ಜಲ ಮಾಲಿನ್ಯ ಮೀತಿ ಮೀರಿ, ಮಾರಕ ವಾತಾವರಣ ನಿರ್ಮಾಣವಾಗಿ ತೊಂದರೆಯಾಗುತ್ತಿದ್ದರೂ ಎಚ್ಚೆತ್ತುಕೊಳ್ಳದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಯಲು ಸೀಮೆ ಜಿಲ್ಲೆಯಲ್ಲಿ ಕೆರೆ, ಕಲ್ಯಾಣಿ, ಮರಗಳ ಸಂರಕ್ಷಣೆಗೆ ಹೆಚ್ಚಿನ ಸಮಯ ಮೀಸಲಿಡಬೇಕು. ನೀರು ಸಂಗ್ರಹ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕೆರೆ, ಕಾಲುವೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.

ಶಿಕ್ಷಕ ಮಹಾಂತೇಶ್ ಕಾಟಪೂರ ಮಠ, ಸ್ವಯಂ ಸೇವಕರಾದ ಮಧು, ಮಂಜುನಾಥ್, ಮೂರ್ತಿ, ರಂಜಿತ್ ಪ್ರಣವ್, ಅಶೋಕ್, ಪ್ರದೀಪ್, ಹರ್ಷ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net