

ಚಿಕ್ಕಬಳ್ಳಾಪುರ : ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿನ ಹೊರಗುತ್ತಿಗೆ ಆಧಾರದ ತ್ಯಾಜ್ಯ ವಾಹನ ಚಾಲಕರನ್ನು ಪೌರಕಾರ್ಮಿಕರ ಮಾದರಿಯಲ್ಲಿಯೇ ಕಾಯಂಗೊಳಿಸಬೇಕು ಎಂದು ನಗರಸಭೆ ಹೊರಗುತ್ತಿಗೆ ವಾಹನ ಚಾಲಕರ ಸಂಘ ಒತ್ತಾಯಿಸಿದೆ.
ನಗರಸಭೆ ಆಯುಕ್ತ ಲೋಹಿತ್ ಧನಂಜಯ್ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿನ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಅನೇಕ ವರ್ಷಗಳಿಂದ ಚಾಲಕರಾಗಿ ಹೊರಗುತ್ತಿಗೆ ಆಧಾರದ ಮೇಲೆ 5220 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 65 ಜನರು ತ್ಯಾಜ್ಯ ವಾಹನ ಚಾಲಕರು ಇದ್ದಾರೆ. ಪ್ರತಿದಿನ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರನ್ನು ಪೌರಕಾರ್ಮಿಕರ ರೀತಿಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳಬೇಕೆಂದು ನಗರಸಭೆ ತ್ಯಾಜ್ಯ ವಾಹನ ಹೊರಗುತ್ತಿಗೆ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಸುರೇಶ್‌ಬಾಬು ಒತ್ತಾಯಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್, ಕಾರ್ಯದರ್ಶಿಗಳಾದ ಅರುಣ್, ವೆಂಕಟೇಶ್, ಕೃಷ್ಣ ಖಜಾಂಚಿ ಮಹೇಶ್, ಪದಾಧಿಕಾರಿಗಳಾದ ಸಗೈರಾಜು, ಧನಂಜಯ್, ರಘು, ಮುಷ್ಕಿನ್, ನರಸಿಂಹಮೂರ್ತಿ, ಮುರಳಿ ಮತ್ತಿತರರು ಇದ್ದರು.