ತ್ಯಾಗರ್ತಿಯಲ್ಲಿ ಅಡಕೆಗೆ ಕೊಳೆರೋಗ

18 tyagarti web
Published on

ತ್ಯಾಗರ್ತಿ: ವಿಪರೀತ ಮಳೆಯಿಂದಾಗಿ ಅಡಕೆ ತೋಟಗಳಿಗೆ ಕೊಳೆ ರೋಗ ಪ್ರಾರಂಭವಾಗಿದ್ದು ರೈತರು ಬೋಡೋ ದ್ರಾವಣವನ್ನು ಸಿಂಪಡಿಸಬೇಕು ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಕಿರಣಕುಮಾರ್ ರೈತರಿಗೆ ಸಲಹೆ ನೀಡಿದರು

ವರದಾಮೂಲದಲ್ಲಿ ಸೋಮವಾರ ಅಡಕೆ ತೋಟ ಸಮೀಕ್ಷೆ ನಡೆಸಿ ಮಾತನಾಡಿ, ತಾಲೂಕಿನಲ್ಲಿ ವರದಾಮೂಲ ಭಾಗದಲ್ಲಿ ಕೊಳೆ ರೋಗ ಲಕ್ಷಣಗಳು ಕಂಡು ಬಂದಿದ್ದು ಹವಾಮಾನ ವೈಪರೀತ್ಯಗಳಿಂದ ಅಡಕೆ ಮಿಡಿ ಉದುರುವಿಕೆ ಮತ್ತು ಕೊಳೆ ರೋಗ ಬಂದಿದೆ. ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕೊಳೆರೋಗ ಉಲ್ಬಣಿಸಬಹುದು ಮುಂಜಾಗ್ರತೆಯಿಂದ ರೈತರು ಆಧುನಿಕ ತಂತ್ರಜ್ಞಾನ ಬಳಸಿ ದೋಟಿ ಮೂಲಕ ಔಷಧ ಸಿಂಪಡಿಸಬಹುದು. ದೋಟಿಕೊಳ್ಳಲು ಸರ್ಕಾರದಿಂದ ಸಹಾಯಧನ ದೊರೆಯುತ್ತದೆ ಎಂದು ಹೇಳಿದರು.

ಅಧಿಕಾರಿ ಉಲ್ಲಾಸ್, ಗ್ರಾಮಸ್ಥರಾದ ಮಂಜುನಾಥ, ವಶಂ ರಾಮಚಂದ್ರ ಭಟ್, ವರದಾ ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net