

ಚಿತ್ರದುರ್ಗ: ನಗರದ ಹೊರವಲಯ ಸೀಬಾರ-ಗುತ್ತಿನಾಡಿನ ವಿಶ್ವಮಾನವ ಸಾಂಸ್ಕತಿಕ ಮತ್ತು ವಿದ್ಯಾಸಂಸ್ಥೆಯಲ್ಲಿ ಮಂಗಳವಾರ 77ನೇ ಸ್ವಾತಂತ್ರ್ಯದಿನವನ್ನು ಸಡಗರ ಸಂಭ್ರಮದೊಂದಿಗೆ ಆಚರಿಲಾಯಿತು. ಸಂಸ್ಥೆ ಅಧ್ಯಕ್ಷ ಟಿ.ಎಚ್.ಬುಡೇನ್‌ಸಾಬ್ ಅವರು ರಾಷ್ಟ್ರ ಧ್ವಜಾ ರೋಹಣ ನೆರವೇರಿಸಿ ಮಾತನಾಡಿದರು. ದೇಶಕ್ಕೆ ದೊರೆತಿರುವ ಸ್ವಾತಂತ್ರೃದ ಹಿಂದೆ ಅನೇಕ ಮಹನೀಯರ ತ್ಯಾಗ,ಬಲಿದಾನ ಹಾಗೂ ಹೋರಾಟವಿದೆ ಎಂಬುದನ್ನು ಮರೆಯಬಾರದು ಎಂದರು.
ಸಂಸ್ಥೆ ಕಾರ‌್ಯದರ್ಶಿಎಂ.ನೀಲಕಂಠದೇವರು,ಸದಸ್ಯರಾದ ಮೌಲಾನ್‌ಸಾಬ್,ಪ್ರಾಚಾರ‌್ಯೆ ಎಚ್.ಆರ್.ಸುಧಾ,ಮುಖ್ಯಶಿಕ್ಷಕ ಜಿ.ಆರ್.ಚನ್ನಬಸಪ್ಪ,ಬಿ.ಜಿ.ಶಿವರುದ್ರಯ್ಯ,ಬೋಧಕ,ಬೋಧಕೇತರ ಸಿಬ್ಬಂದಿ ಇದ್ದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ನೃ ತ್ಯ,ಭಾಷಣ,ಪಿರಮಿಡ್‌ರಚನೆ,ವೇಷಭೂಷಣ ಮತ್ತಿತರ ವಿದ್ಯಾರ್ಥಿಗಳು ನಡೆಸಿಕೊಟ್ಟಂಥ ಸಾಂಸ್ಕೃತಿಕ ಕಾರ‌್ಯಕ್ರಮಗಳು ಮೆಚ್ಚುಗೆಗೆ ಪಾತ್ರ ವಾದವು.