

ಹುಲಸೂರು: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಈ ಭಾಗಕ್ಕೆ ಸ್ವಾತಂತ್ರ್ಯ ಸಂಭ್ರಮ ಸಿಗಲಿಲ್ಲ. ಅನೇಕರ ತ್ಯಾಗ ಬಲಿದಾನದ ಫಲವಾಗಿ ಈ ಭಾಗಕ್ಕೆ ಹೈದರಾಬಾದ್ ನಿಜಾಮನಿಂದ ಮುಕ್ತಿ ದೊರೆತಿದೆ ಎಂದು ತಹಸೀಲ್ದಾರ್ ಶಿವಾನಂದ ಮೇತ್ರೆ ಹೇಳಿದರು.
ಪಟ್ಟಣದ ಗುರು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಅಧ್ಯಕ್ಷತೆ ಭಾಗವಹಿಸಿ ಮಾತನಾಡಿದ ಅವರು, ಗೋರ್ಟಾ (ಬಿ) ಹತ್ಯಾಕಾಂಡ ಮರೆಯದಂತಾಗಿದೆ. ಸ್ವಾತಂತ್ರ್ಯಕ್ಕಾಗಿ ನೂರಾರು ಜನರು ಪ್ರಾಣ ತೆತ್ತಿದ್ದು, ಅವರನ್ನು ಇಂದು ಸ್ಮರಿಸಿಕೊಳ್ಳಬೇಕು ಎಂದರು.
ಶಾಸಕ ಶರಣು ಸಲಗರ ಮಹಾತ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ , ಉಪಾಧ್ಯಕ್ಷೆ ಮಿರಾಬಾಯಿ ಗಾಯಕವಾಡ, ಪಿಡಿಒ ರಮೇಶ ಮಿಲಿಂದಕರ, ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ಪಿಕೆಪಿಎಸ್ ಸಹಕಾರ ಸಂಘದ ಅಧ್ಯಕ್ಷ ಎಂ.ಜಿ ರಾಜೋಳೆ, ಗ್ರಾಪಂ ಸದಸ್ಯರಾದ ದೇವೇಂದ್ರ ಪವಾರ್, ವಿವೇಕ ಚಳಕಾಪುರೆ, ವಿದ್ಯಾಸಾಗರ ಬನಸೂಡೆ, ಮನ್ಸೂರ್ ದಾವಲಜಿ, ಧನಾಜಿ ಸೂರ್ಯವಂಶಿ, ಅನುಸಯಾ ಸೂರ್ಯಕಾಂತ, ಚಂದ್ರಕಲಾ, ಜಬ್ಬಾರ್ ಸೌದಾಗಾರ್, ರಣಜಿತ ಗಾಯಕವಾಡ, ಬಾಬುರಾವ ಬಾಲಕುಂದೆ ಇತರರಿದ್ದರು.