

ಕಲಬುರಗಿ: ಭಗತ್‌ಸಿಂಗ್, ರಾಜಗುರು, ಸುಖದೇವ ಸೇರಿ ಹಲವಾರು ಸ್ವಾತಂತ್ರÈ ಹೋರಾಟಗಾರರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರÈ ದೊರಕಿದ್ದು, ಅವರ ಕ್ರಾಂತಿಕಾರಿ ಜೀವನವನ್ನು ಸ್ಫೂರ್ತಿಯಾಗಿ ಪಡೆಯಬೇಕು ಎಂದು ಡಾ.ನವೀನಕುಮಾರ ಬಾಲಚೆಡ್ ಹೇಳಿದರು.
ನಗರದ ರಾಜಮಹಲ್ ಲೇಔಟ್‌ನ ಲಕ್ಷಿö್ಮÃ ಮಂದಿರದ ಬಳಿ ಜನಪ್ರಿಯ ಸಾಂಸ್ಕೃತಿಕ ಕಲಾ ಸಂಘದಿAದ ಶನಿವಾರ ಸಂಜೆ ಏರ್ಪಡಿಸಿದ್ದ ಹುತಾತ್ಮರ ದಿನಾಚರಣೆ, ದೇಶಭಕ್ತಿ ಗೀತೆಗಳು, ನಾಟಕ ಪ್ರದರ್ಶನದಲ್ಲಿ ಮಾತನಾಡಿದರು.
ಪ್ರಕಾಶ ಪೂಜಾರಿ, ಗಂಗೋತ್ರಿ ಮಠಪತಿ, ರೇಣುಕಾ ಭಜಂತ್ರಿ ಅವರು ಕ್ರಾಂತಿ, ದೇಶ ಭಕ್ತಿ ಗೀತೆಗಳನ್ನು ಹಾಡಿದರು. ಅಭಿಷೇಕ ಮಠಪತಿ ತಬಲಾ ಸಾಥ್ ನೀಡಿದರು. ಮಣಿಕಂಠ ಮಠಪತಿ ಏಕವ್ಯಕ್ತಿ ನಾಟಕ ಪ್ರಸ್ತುತ ಪಡಿಸಿದರು.
ಶ್ರೀ ಸಾಯಿ ಕಾಲೇಜಿನ ಉಪ ಪ್ರಾಚಾರ್ಯ ವಿಶಾಲಾಕ್ಷಿ ದೇಸಾಯಿ, ಕಲ್ಯಾಣಿ ಭಜಂತ್ರಿ, ಡಾ. ಚಂದ್ರಕಾAತ ಬಿರಾದಾರ ಇತರರಿದ್ದರು. ಶಾಂತಲಿAಗಯ್ಯ ಮಠಪತಿ ಸ್ವಾಗತಿಸಿದರು. ಅಪೂರ್ವ ಬಾಲಚೆಡ ವಂದಿಸಿದರು.