

ಕಮಲಾಪುರ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ವೀರ ಮರಣವನ್ನಪ್ಪಿದ ಹೋರಾಟಗಾರರ ತ್ಯಾಗ, ಬಲಿದಾನ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಡಾ.ಬಸವರಾಜ ಪಾಟೀಲ್ ಸೇಡಂ ಹೇಳಿದರು.
ಶ್ರೀ ಗುರುಶಾಂತಪ್ಪ ಮಾಲಿಪಾಟೀಲ್ ಕ್ರೀಡಾಂಗಣದಲ್ಲಿ ನವ ವಿಕಾಸ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಹೈದರಾಬಾದ್ ಕರ್ನಾಟಕ ಹಾಗೂ ಗೋವಾ ವಿಮೋಚನಾ ಹೋರಾಟಗಾರರನ್ನು ಸನ್ಮಾನಿಸಿ ಮಾತನಾಡಿ, ಭಾರತ ಮಾತೆಯ ವೀರ ಪುತ್ರರ ಹೋರಾಟದ ಫಲವಾಗಿ ನಾವಿಂದು ಸ್ವತಂತ್ರವಾದ ಜೀವನ ಸಾಗಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಡಾ.ಅಂಬೇಡ್ಕರ್ ವೃತ್ತದಿಂದ ಶ್ರೀ ಬಸವೇಶ್ವರ ವೃತ್ತದವರೆಗೂ ಹೋರಾಟಗಾರರ ಭಾವಚಿತ್ರದ ಮೆರವಣಿಗೆ ನಡೆಯಿತು.
ಸೋಂತದ ಶ್ರೀ ಶಂಕರಲಿಂಗ ಮಹಾರಾಜ, ರಾಜ್ಯಸಭೆ ಸದಸ್ಯ ಬಸವರಾಜ ಪಾಟೀಲ್, ನಿವೃತ್ತ ವಿಜ್ಞಾನಿ ಬಸವರಾಜ ಪಾಟೀಲ್ ಮಹಾಗಾಂವ್, ಪುಂಡಲೀಕರಾವ ಚಿರಡೆ, ಶಶಿಕಲಾ ಮಾಲಿಪಾಟೀಲ್, ಶ್ರುತಿ ಬಿರಾದಾರ, ಶಿವರಾಜ ಪಾಟೀಲ್, ಶಾಂತಪ್ಪ ಮಾಲಿಪಾಟೀಲ್, ಪ್ರದೀಪ ಭಾಲ್ಕಿ, ರವೀಂದ್ರ ಬಿ.ಕೆ. ಇತರರಿದ್ದರು.