ತ್ಯಾಗ, ಅಹಿಂಸೆಗೆ ಜೈನ ಧರ್ಮ ಪ್ರಸಿದ್ಧ

24BRG1
ಬೋರಗಾಂವ ಪಟ್ಟಣದ ಪಾವನ ವರ್ಷಯೋಗ ಸಭಾ ಮಂಟಪ ಆಚಾರ್ಯ ಕುಲರತ್ನಭೂಷಣ ಮುನಿ ಮಹಾರಾಜರ ನೇತೃತ್ವದಲ್ಲಿ ಉದ್ಘಾಟನೆಗೊಂಡಿತು. ಶರದ ಜಂಗಟೆ, ಭರತ ಪಾಟೀಲ, ಅನೂಜ ಹವಲೆ, ಭರತ ಪಾಟೀಲ ಇತರರಿದ್ದರು.
Published on

ಬೋರಗಾಂವ: ಜೈನ ಧರ್ಮ ತ್ಯಾಗ ಮತ್ತು ಅಹಿಂಸೆಗೆ ಹೆಸರುವಾಸಿಯಾಗಿದೆ ಎಂದು ಆಚಾರ್ಯ ಶ್ರೀ 108 ಕುಲರತ್ನಭೂಷಣ ಮುನಿ ಮಹಾರಾಜರು ಹೇಳಿದರು.

ಪಟ್ಟಣದಲ್ಲಿ ಭಗವಾನ್​ ಪಾರ್ಶ್ವನಾಥ ಮೋ ಕಲ್ಯಾಣ ದಿನ ಅಂದರೆ ಮುಕುಟ ಸಪ್ತಮಿ ದಿನದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಸವೋರ್ದಯ ಪಾವನ ವರ್ಷ ಯೋಗ ಧ್ವಜಾರೋಹಣ, ಮಂಟಪ ಉದ್ಘಾಟನೆ ಹಾಗೂ ಸಮ್ಮೇದ ಶಿಖರಜಿ ಕಲಾಕೃತಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಐದು ತಿಂಗಳು ಚಾತುರ್ಮಾಸ್ಯ ಹಮ್ಮಿಕೊಂಡು ವಿವಿಧ ಪೂಜೆ, ಶಿಬಿರ ಆಯೋಜಿಸಿ ಪ್ರಾಣಿ ಮತ್ತು ಪಗಳ ಹಿಂಸೆ ತಪ್ಪಿಸಲು ಶ್ರಮಿಸಲಾಗುವುದು. ಶಾಂತಿಸಾಗರ ಮುನಿ ಮಹಾರಾಜರ ಆದರ್ಶ ಜನರ ಕಲ್ಯಾಣ ಮತ್ತು ಹಿತಾಸಕ್ತಿಗಾಗಿ ಪ್ರಮುಖವಾಗಿವೆ. ಚಾತುರ್ಮಾಸ್ಯದ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆತ್ಮಕಲ್ಯಾಣ ಮಾಡಿಕೊಳ್ಳಬೇಕು ಎಂದರು.

ಅಣ್ಣಾಸಾಹೇಬ ಹಾವಲೆ ದಂಪತಿ ಧರ್ಮ ಧ್ವಜಾರೋಹಣ, ಪಪಂ ಸದಸ್ಯ ಶರದ ಜಂಗಟೆ ದಂಪತಿ ಮಂಟಪ ಉದ್ಘಾಟನೆ ನೆರವೇರಿಸಿದರು. ಭರತ ಪಾಟೀಲ ಶಿಖರಜಿ ಕಲಾಕೃತಿಗೆ ಪೂಜಿಸಿದರು.

ಮಾಜಿ ಸಂಸದ ರಾಜು ಶೆಟ್ಟಿ, ಬಸವ ಜ್ಯೋತಿ ಯುವ ಅಧ್ಯ ಬಸವ ಪ್ರಸಾದ ಜೊಲ್ಲೆ, ಶರದ ಜಂಗಟೆ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಪ್ಪಾಸಾಹೇಬ ಜೊಲ್ಲೆ, ರಾಮಗೊಂಡ ಪಾಟೀಲ, ಜಯಕುಮಾರ ಖೋತ, ಅನೂಜ್​ ಹಾವಲೆ, ಪವನ ಪಾಟೀಲ, ರಾಕೇಶ ಜೈನ, ರಾಜೇಶ ಜೈನ, ಸುಭಾಷ ಚಂದನ, ಶ್ರಾವಕ ಶ್ರಾವಕಿಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net