ತೋಳಗಳ ದಾಳಿಗೆ 12 ಕುರಿ ಮರಿ ಸಾವು

11-nrd ship death
Published on

ನರಗುಂದ: ತೋಳಗಳ ದಾಳಿಗೆ 12ಕ್ಕೂ ಹೆಚ್ಚು ಕುರಿ ಮರಿಗಳು ಮೃತಪಟ್ಟಿರುವ ಘಟನೆ ತಾಲೂಕಿನ ಹಿರೇಕೊಪ್ಪ ಗ್ರಾಮದ ಜಮೀನಿನಲ್ಲಿ ಭಾನುವಾರ ಸಂಭವಿಸಿದೆ. ಹಿರೇಕೊಪ್ಪದ ಮಹಾದೇವಪ್ಪ ಸಂಗಪ್ಪ ಬಾಳಣ್ಣವರ ಎಂಬುವರಿಗೆ ಸೇರಿದ 12 ಕುರಿ ಮರಿಗಳು ಮೃತಪಟ್ಟಿವೆ. ಹಿರೇಕೊಪ್ಪ ಗ್ರಾಮದ ಬಳಿಯಿರುವ ಅಡಿವೆಪ್ಪ ಮೇಟಿ ಎಂಬುವರ ಜಮೀನಿನಲ್ಲಿ ಕುರಿಗಾಹಿ ಮಹಾದೇವಪ್ಪ ಅವರು ಕುರಿ ಸಾಕಾಣಿಕೆಯ ದೊಡ್ಡಿ ಹಾಕಿದ್ದರು. ಭಾನುವಾರ ಮಧ್ಯಾಹ್ನ ಕುರಿ ದೊಡ್ಡಿಯ ಕಾವಲಿಗೆ ಯಾರೂ ಇಲ್ಲದ ವೇಳೆ ನಾಲ್ಕೈದು ತೋಳಗಳ ಹಿಂಡು ದಾಳಿ ನಡೆಸಿ ಕುರಿ ಮರಿಗಳನ್ನು ತಿಂದು ಹಾಕಿವೆ. ಹಗಲು-ರಾತ್ರಿ ಕಷ್ಟಪಟ್ಟು ಕುರಿ ಮರಿಗಳನ್ನು ಸಾಕಿದ್ದೆ. ಈ ಘಟನೆಯಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎಂದು ಮಹಾದೇವಪ್ಪ ಗೋಳಾಡಿದರು. ಸ್ಥಳಕ್ಕೆ ಪಶು ಇಲಾಖೆ ವೈದ್ಯ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net