ತೋಟಪಟ್ಟಿ ರಸ್ತೆ ಅಭಿವೃದ್ಧಿಗೆ ಪ್ರಯತ್ನ

1
Published on

ಮೂಡಲಗಿ: ಉತ್ತಮವಾಗಿ ಮಳೆಯಾಗುತ್ತಿದ್ದು, ರೆತರ ಮುಖದಲ್ಲಿ ಮಂದಹಾಸ ಮೂಡುತ್ತಿದೆ. ರೆತರು ಸುಖವಾಗಿದ್ದರೆ, ಇಡೀ ದೇಶವೇ ಸಮೃದ್ಧಿಯಿಂದ ಇರುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಭಾನುವಾರ ಮಹಾಲಕ್ಷಿ$್ಮ ದೇವರ ದರ್ಶನ ಪಡೆದು ಮಾತನಾಡಿದರು. ಈ ಬಾರಿ ಹಿಡಕಲ್​ ಜಲಾಶಯವು ಭರ್ತಿಯಾಗಿದೆ. ಇದರಿಂದ ರೆತರಿಗೆ ನೀರಿನ ಸಮಸ್ಯೆಯಾಗುವುದಿಲ್ಲ. ಮೇ ತನಕ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.
ಶಾಸಕರನ್ನು ವಿವಿಧ ಸಮಾಜಗಳ ಮುಖಂಡರು ಸನ್ಮಾನಿಸಿದರು. ಗ್ರಾಪಂ ಅಧ್ಯೆ ನೀಲವ್ವ ಹೊಸಟ್ಟಿ, ಉಪಾಧ್ಯೆ ಜಯಶ್ರೀ ಮಿರ್ಜಿ, ಮುಖಂಡರಾದ ದೊಡ್ಡಬಸಪ್ಪ ಸಂತಿ, ಲಕ್ಷ$್ಮಣ ಕತ್ತಿ, ಭೀಮಶಿ ಮಗದುಮ್ಮ, ಬಿ.ಜಿ. ಸಂತಿ, ಹಣಮಂತ ತೇರದಾಳ, ಕುಮಾರ ಲೋಕನ್ನವರ, ಸುರೇಶ ಕತ್ತಿ, ಅಡಿವೆಪ್ಪ ಪಾಲಭಾವಿ, ಶಂಕ್ರಯ್ಯ ಹಿರೇಮಠ, ಶ್ರೀಕಾಂತ ದುರದುಂಡಿ, ನಾರಾಯಣ ಪೂಜೇರಿ, ಬಸವಣ್ಣೆಪ್ಪ ಡಬ್ಬನ್ನವರ, ಶ್ರೀಶೆಲ ಭಾಗೋಡಿ, ಮಲ್ಲಪ್ಪ ಛಬ್ಬಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net