ತೋಟದ ಮನೆಗೆ ನುಗ್ಗಿ 16ಲಕ್ಷ ರೂ. ಚಿನ್ನಾಭರಣ ದೋಚಿದ ಕಳ್ಳರು!

KUDACHI ROHILE HOUSE
ಕುಡಚಿ ಗ್ರಾಮದ ಜಮಖಂಡಿ ರಸ್ತೆಯಲ್ಲಿರುವ ರೊಹಿಲೆ ಕುಟುಂಬದ ಕಳ್ಳತನಕ್ಕೀಡಾಗಿರುವ ಮನೆ.
Published on

ಬೆಳಗಾವಿ: ತೋಟದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯಲ್ಲಿ 330 ಗ್ರಾಂ ಚಿನ್ನಾಭರಣ ಹಾಗೂ 2.90 ಲಕ್ಷ ರೂ. ನಗದು ದೋಚಿಕೊಂಡು ಪರಾರಿಯಾದ ಘಟನೆ ರಾಯಬಾಗ ತಾಲೂಕಿನ ಕುಡಚಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕುಡಚಿ-ಜಮಖಂಡಿ ರಸ್ತೆಯಲ್ಲಿರುವ ಅಲಮ್ ರೋಹಿಲೆ ಎಂಬುವರ ಮನೆಯೇ ಕಳ್ಳತನಕ್ಕೀಡಾಗಿದೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬೀಗ ಮುರಿದು ಒಳನುಗ್ಗಿದ ಕಳ್ಳರು ಮನೆಯ ಲಾಕರ್ ದಲ್ಲಿ 330 ಗ್ರಾಂ ಚಿನ್ನಾಭರಣ ಹಾಗೂ ನಗದು ಸೇರಿ ಅಂದಾಜು 16.10 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನಕ್ಕೀಡಾಗಿವೆ ಎಂದು ಕುಡಚಿ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ನಡೆಸುವುದಕ್ಕಾಗಿ ಬೆಳಗಾಯಿಂದ-ಕುಡಚಿಗೆ ತೆರಳಿದ್ದ ಶ್ವಾನದಳದ ತಂಡ ಕಳ್ಳತನಕ್ಕೀಡಾದ ಮನೆಯಿಂದ 200 ಮೀಟರ್ ವರೆಗೆ ಸಂಚರಿಸಿ ವಾಪಸ್ ಮರಳಿತು ಎಂದು ಪೊಲೀಸರು ತಿಳಿಸಿದ್ದಾರೆ. ಕುಡಚಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net