ತೋಟದ ಬೆಳೆಗೆ ಮಾತ್ರ ಸೂಳೆಕೆರೆ ನೀರು- ನೀರಾವರಿ ನಿಗಮ ಸ್ಪಷ್ಟನೆ

03BGSHIVAMOGGASULEKERE.jpg
Published on

ದಾವಣಗೆರೆ: ಶಾಂತಿಸಾಗರ (ಸೂಳೆಕೆರೆ) ಅಚ್ಚುಕಟ್ಟು ಪ್ರದೇಶದಲ್ಲಿ 2023-24ನೇ ಸಾಲಿನ ಮಳೆಗಾಲದ ಹಂಗಾಮಿಗೆ ಕುಡಿಯುವ ನೀರನ್ನು ಹೊರತುಪಡಿಸಿ ಕೆರೆಯ ನೀರನ್ನು ತೋಟದ ಬೆಳೆಗೆ ಮಾತ್ರ ಹರಿಸಲು ಉದ್ದೇಶಿಸಲಾಗಿದೆ ಎಂದು ನೀರಾವರಿ ನಿಗಮ ತ್ಯಾವಣಗಿ ಭದ್ರಾ ನಾಲಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳೆ ಮಾದರಿ ಉಲ್ಲಂಘಿಸುವವರು, ನೀರಾವರಿ ಕಾಲುವೆ ಹಾಗೂ ಕಟ್ಟಡಗಳನ್ನು ಜಖಂಗೊಳಿಸುವವರು ನಿಯಮಿತ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸುವವರು ಮತ್ತು ಅನಧಿಕೃತ ನೀರಾವರಿ ಬೆಳೆಗಾರರು ಕರ್ನಾಟಕ ನೀರಾವರಿ ಕಾಯ್ದೆ 1965ರ ವಿವಿಧ ನಿಯಮಗಳ ಪ್ರಕಾರ ಕಾನೂನು ಕ್ರಮಕ್ಕೆ ಒಳಗಾಗಲಿದ್ದಾರೆ ಎಂದು ಹೇಳಿದ್ದಾರೆ.

ಪ್ರಕಟಿತ ಬೆಳೆ ಉಲ್ಲಂಘಿಸಿ ಬೇರೆ ಬೆಳೆಯನ್ನು ಬೆಳೆದರೆ ಜಲಸಂಪನ್ಮೂಲ ಇಲಾಖೆ ಜವಾಬ್ಧಾರಿಯಾಗುವುದಿಲ್ಲ. ಇದಕ್ಕೆ ರೈತ ಬಾಂಧವರ ಸಹಕಾರ ಅತ್ಯಗತ್ಯ ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net