ತೋಟಗಾರಿಕೆ, ವಾಣಿಜ್ಯ ಬೆಳೆಗಳತ್ತ ರೈತರ ಒಲವು ಹೆಚ್ಚಳ

chandragutti WEB
Published on

ಚಂದ್ರಗುತ್ತಿ: ಇತ್ತೀಚಿನ ದಿನಗಳಲ್ಲಿ ರೈತರು ಕೂಲಿಯಾಳಿನ ಸಮಸ್ಯೆ, ವಿಪರೀತ ರೋಗಬಾಧೆ ಹಾಗೂ ಕಡಿಮೆ ಇಳುವರಿಯಿಂದಾಗಿ ಭತ್ತ ಬೆಳೆಯುವುದನ್ನು ಬಿಟ್ಟು ವಾಣಿಜ್ಯ ಹಾಗೂ ತೋಟಗಾರಿಕಾ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಸುಬ್ರಾಯ ನಾಯ್ಕ ಹೇಳಿದರು.

ಅಂಕರವಳ್ಳಿ ಗ್ರಾಮದ ಸದಾನಂದ ಗೌಡ ಎಂಬುವರ ಜಮೀನಿನಲ್ಲಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಯಂತ್ರಶ್ರೀ ಸಾಲು ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೊರಕುವ ಈ ಯಂತ್ರದಿಂದ ವೈಜ್ಞಾನಿಕವಾಗಿ ನಾಟಿ ಮಾಡಿದರೆ ಕೂಲಿಯಾಳಿನ ಸಮಸ್ಯೆ ನಿವಾರಣೆ ಮಾಡಬಹುದು ಹಾಗೂ ಹೆಚ್ಚು ಇಳುವರಿಯನ್ನು ಪಡೆಯಬಹುದು ಎಂದರು.

ಆನವಟ್ಟಿಯ ಯಂತ್ರ ಮನೆ ಪ್ರಬಂಧಕರಾದ ವಿರುಪಾಕ್ಷಪ್ಪ, ಕೃಷಿ ಮೇಲ್ವಿಚಾರಕ ಲೋಕೇಶ್, ಗ್ರಾಮ ಸಮಿತಿ ಅಧ್ಯಕ್ಷ ಜಯಶೀಲ ಗೌಡ, ವಲಯ ಮೇಲ್ವಿಚಾರಕ ಮಾರುತಿ, ಸೇವಾ ಪ್ರತಿನಿಧಿ ಯೋಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net