ತೋಟಗಾರಿಕೆ ದಿನಾಚರಣೆ ಹಬ್ಬವಾಗಿ ಆಚರಿಸಬೇಕು

bkt-08-12
ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಶುಕ್ರವಾರ ಡಾ.ಎಂ.ಎಚ್.ಮರಿಗೌಡರ ಸ್ಮರಣಾರ್ಥ ಹಮ್ಮಿಕೊಂಡಿದ್ದ ತೋಟಗಾರಿಕೆ ದಿನಾವರಣೆಯಲ್ಲಿ ತೋಟಗಾರಿಕೆ ಕ್ಷೇತ್ರದ ಐವರು ಸಾಧಕರ ರೈತರನ್ನು ವಿವಿ ವತಿಯಿಂದ ಸನ್ಮಾನಿಸಲಾಯಿತು. ವಿವಿ ಕುಲಪತಿ ಡಾ.ವಿಷ್ಣುವರ್ಧನ, ವ್ಯವಸ್ಥಾಪನಾ ಮಂಡಳಿ ಸದಸ್ಯ ಡಾ.ವಾಸುದೇವನ್ ಮತ್ತಿತರರು ಇದ್ದರು.
Published on

ಬಾಗಲಕೋಟೆ: ರಾಷ್ಟಿçÃಯ ತೋಟಗಾರಿಕೆ ದಿನಾಚರಣೆಯನ್ನು ಮುಂದಿನ ದಿನಗಳಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ತೋಟಗಾರಿಕೆ ಹಬ್ಬವಾಗಿ ಆಚರಿಸಬೇಕೆಂದು ಬಾಗಲಕೋಟೆ ತೋ.ವಿ.ವಿ. ಕುಲಪತಿ ಡಾ.ವಿಷ್ಣುವರ್ಧನ ತಮ್ಮ ಸಿಬ್ಬಂದಿಗೆ ಸಲಹೆ ನೀಡಿದರು.

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ತೋಟಗಾರಿಕೆ ವಿಸ್ತರಣಾ ಘಟಕದಿಂದ ಡಾ.ಎಂ.ಎಚ್.ಮರಿಗೌಡರ ಸ್ಮರಣಾರ್ಥ ಶುಕ್ರವಾರ ಹಮ್ಮಿಕೊಂಡಿದ್ದ ತೋಟಗಾರಿಕೆ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವಕರು ಕೃಷಿಯತ್ತ ಮುಖ ಮಾಡಬೇಕು. ತೋಟಗಾರಿಕೆಯಿಂದ ಅಽಕ ಲಾಭವನ್ನು ಪಡೆದು ಸ್ವಉದ್ಯೋಗವನ್ನು ಪಡೆದುಕೊಳ್ಳÀ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆಗೈದ ಜಿಲ್ಲೆಯ ಆಯ್ದ ಐದು ರೈತ ಸಾಧಕರಿಗೆ ಗೌರವ ಸನ್ಮಾನ ಮಾಡಲಾಯಿತು.

ಬ್ಲೂಬೇರಿ ಮಾದರಿ ರೈತ ಶಿರೋಳ ಗ್ರಾಮದ ಅಭಿನಂದನ ಕಡಕೋಳ, ಸಾವಯವ ಅರಿಷಿಣ ಕೃಷಿಕ, ತುಕ್ಕಾನಟ್ಟಿ ಗ್ರಾಮದ ರಾಮಪ್ಪ ಉಪ್ಪಾರ, ಮುಧೋಳದಲ್ಲಿ ಸೇಬು ಹಣ್ಣು ಬೆಳೆದ ಯಶಸ್ವಿ ರೈತ ಶ್ರೀಶೈಲ ಮಲ್ಲಪ್ಪಾ ತೇಲಿ, ವೀಳ್ಯದೆಲೆ ಬೆಳೆದ ಕೃಷಿ ಚೊಳಚಗುಡ್ಡದ ಜಿ. ಎಸ್. ಪಾಟೀಲ, ನೇರಳೆ ಹಣ್ಣಿನ ಯಶಸ್ವಿ ರೈತ ಹುಲಿಕೇರಿ ಗ್ರಾಮದ ಅಪ್ಪಣ್ಣಾ ದಾದನಟ್ಟಿ, ಇಂಜಿನವಾರಿ ಗ್ರಾಮದ ಯಶಸ್ವಿ ಜೇನು ಕೃಷಿಕ ತಿಪ್ಪಣ್ಣಗೌಡರ ಅವರಿಗೆ ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು.

ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ಡಾ. ವಾಸುದೇವನ್ ಅವರು ತೋಟಗಾರಿಕೆಯ ನವ ಇತಿಹಾಸಕ್ಕೆ ಮುನ್ನುಡಿ ಬರೆದ ಡಾ.ಎಂ.ಎಚ್.ಮರಿಗೌಡರ ನಡೆದ ಬಂದ ದಾರಿ ವಿವರಿಸಿದರು.

ಡೀನ್ ಡಾ.ಬಾಲಾಜಿ ಕುಲಕರ್ಣಿ, ಶಿಕ್ಷಣ ನಿರ್ದೇಶಕ ಡಾ. ಎನ್. ಕೆ. ಹೆಗಡೆ, ಸಂಶೋಧನಾ ನಿರ್ದೇಶಕ ಡಾ. ಬಿ. ಫಕ್ರುದೀನ, ವಿಸ್ತರಣಾ ನಿರ್ದೇಶಕ ಡಾ.ವೆಂಕಟೇಶಲು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net