ತೋಟದಲ್ಲಿ ಕೆಲಸ ಮಾಡುತ್ತಿದ್ದ ಮೂವರನ್ನು ಅಟ್ಟಾಡಿಸಿದ ಕಾಡಾನೆ

web 1 (15)
Published on

ಚಿಕ್ಕಮಗಳೂರು: ಮೂರು ದಿನಗಳ ಹಿಂದೆ ಬೇಲೂರು ತಾಲೂಕಿನ ಚುಂಗನಹಳ್ಳಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮೂವರನ್ನು ಅಟ್ಟಾಡಿಸಿದ್ದ ಕಾಡಾನೆ ಮಂಗಳವಾರ ಬೆಳಗ್ಗೆ ಮೂಡಿಗೆರೆ ತಾಲೂಕಿನ ಗೌತಹಳ್ಳಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿ ಆತಂಕ ಹುಟ್ಟಿಸಿದೆ.
ಚೀಕನಹಳ್ಳಿ ರಸ್ತೆಯಲ್ಲಿ ಬೈಕ್ ಸವಾರರಿಗೆ ಎದುರಾಗಿದೆ. ಸ್ವಲ್ಪ ದೂರದಲ್ಲೇ ಇರುವ ಕಿಟ್ಟೇಗೌಡ ಎಂಬುವರ ತೋಟಕ್ಕೆ ನುಗ್ಗಿ ಕಾಫಿ ಗಿಡಗಳನ್ನು ನಾಶಗೊಳಿಸಿದೆ. ಗ್ರಾಮಸ್ಥರು ಗೆಂಡೆಹಳ್ಳಿ ಕಡೆಗೆ ಆನೆಯನ್ನು ಓಡಿಸಿದರು. ಆದರೆ ಮತ್ತೆ ಅದೇ ದಾರಿಯಲ್ಲಿ ವಾಪಸಾಗಿ ಗೌತಹಳ್ಳಿ ಕಡೆಗೆ ಬಂದಿದೆ. ಗ್ರಾಮದ ಕಮಲಮ್ಮ ಎಂಬುವವರು ನಡೆದುಕೊಂಡು ಹೋಗುತ್ತಿದ್ದಾಗ ಆನೆ ಎದುರಾಗಿ ಅಟ್ಟಿಸಿಕೊಂಡು ಬಂದಿದೆ. ಅಲ್ಲೇ ಎದುರುಗಿದ್ದ ಮನೆ ಒಳಗಡೆ ಸೇರಿ ಬಚಾವಾಗಿದ್ದಾರೆ. ಅಷ್ಟರಲ್ಲಿ ಬಂದ ಗ್ರಾಪಂ ಸದಸ್ಯ ಪ್ರಸನ್ನಕುಮಾರ್ ಹಾಗೂ ಜಿ.ಎಂ.ಕಿರಣ್ ಮತ್ತಿತರು ಪಟಾಕಿ ಸಿಡಿಸಿದ್ದರಿಂದ ಕಾಫಿ ತೋಟಕ್ಕೆ ತೆರಳಿದೆ. ಕೂಡಲೆ ಗ್ರಾಮಸ್ಥರು ಮೂಡಿಗೆರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಆನೆಯ ಹೆಜ್ಜೆಗುರುತು ಹಿಡಿದು ಸಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net