

ಶಹಾಬಾದ್: ತೊನಸನಳ್ಳಿ(ಎಸ್) ಗ್ರಾಮದ ಶ್ರೀ ಗುರು ಸಂಗಮೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರ ನವರಾತ್ರಿ ಅನುಷ್ಠಾನ ಮಂಗಲ ಮಹೋತ್ಸವ ಶುಕ್ರವಾರ ಸಂಭ್ರಮದಿAದ ನಡೆಯಿತು. ಬೆಳಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಅಲಂಕಾ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಬಳಿಕ 501 ಮುತ್ತೆÊದೆಯರಿಗೆ ಸರಗಡಿಯ ಶ್ರೀ ರೇವಣಸಿದ್ಧ ಶಿವಾಚಾರ್ಯ, ಶ್ರೀ ಕೊಟ್ಟುರೇಶ್ವರ ಶರಣರು, ಶ್ರೀ ರೇವಣಸಿದ್ಧ ಚರಂತೇಶ್ವರ ಶ್ರೀ, ಶ್ರೀ ಗುರುದೇವ ಶರಣರ ಸಾನ್ನಿಧ್ಯದಲ್ಲಿ ಅರಿಶಿಣ, ಕುಂಕುಮ, ಕೊಬ್ಬರಿ ಬಟ್ಟಲು, ಅಡಕಿ, ಉತ್ತತ್ತಿ, ಬಾದಾಮಿ, ಹೂವು, ಹಣ್ಣುಗಳೊಂದಿಗೆ ಉಡಿ ತುಂಬಿ ಆಶೀರ್ವದಿಸಲಾಯಿತು. ಪ್ರಮುಖರಾದ ಅನೀಲಕುಮಾರ ಮರಗೋಳ, ಮಲ್ಲಿಕಾರ್ಜುನ ಗೊಳೇದ, ವಿರೇಶ ರಾಮಶೆಟ್ಟಿ ಇತರರಿದ್ದರು.