

ಮಳಖೇಡ: ತೊಟ್ನಳ್ಳಿ ಶ್ರೀ ಮಹಾಂತೇಶ್ವರ ಮಠದ ಹಿಂದಿನ ಪೀಠಾಧಿಪತಿ, ಆಯುರ್ವೇದ ಕೇಸರಿ ಶ್ರೀ ಗುರುಪಾದೇಶ್ವರ ಮಹಾಸ್ವಾಮೀಜಿ 24ನೇ ಪುಣ್ಮಸ್ಮರಣೆ ಪೀಠಾಧಿಪತಿ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯ ನೇತೃತ್ವದಲ್ಲಿ ಅ.27ರಂದು ಜರುಗಲಿದೆ. ಸೇಡಂ ಶ್ರೀ ಶಿವಶಂಕರ ಶಿವಾಚಾರ್ಯ, ಟೆಂಗಳಿ ಮತ್ತು ಮಂಗಲಗಿ ಶ್ರೀ ಡಾ.ಶಾಂತಸೋಮನಾಥ ಶಿವಾಚಾರ್ಯ, ಮಳಖೇಡದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಸಾನ್ನಿಧ್ಯ ವಹಿಸಲಿದ್ದು, ಯಡಗಾದ ಸಿದ್ದಯ್ಯಪ್ಪ ಮುತ್ಯಾ ಉಪಸ್ಥಿತರಿರುವರು. ಕರದಾಳದ ತೋಟಯ್ಯ ಶಾಸ್ತಿç ವೈದಿಕತ್ವ ನಡೆಸಿಕೊಡುವರು. ಅಣೆಪ್ಪಗೋಳ ಪರಿವಾರದಿಂದ ಶ್ರೀ ಗುರುಪಾದೇಶ್ವರರ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿ಼ಷೇಕ, ನಾಮಾವಳಿ ಪಠಣ, ಮಹಾ ಮಂಗಳಾರತಿ ನಂತರ ಮುತ್ತೆÊದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಮಹಾಪ್ರಸಾದ ವಿತರಣೆ, ಆಹೋರಾತ್ರಿ ಭಜನೆ ನಡೆಯಲಿದೆ. ಬುಧವಾರದಿಂದ 27ರವರೆಗೆ ಪ್ರತಿದಿನ ಸಂಜೆ 7.30ರಿಂದ ರಾತ್ರಿ 9ರವರೆಗೆ ವೀರೇಶ ಶಾಸ್ತಿç ಮಲಕೂಡ ಅವರಿಂದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜೀವನ ಚರಿತ್ರೆ ಕುರಿತು ಪ್ರವಚನ ನಡೆಯಲಿದ್ದು, ಮಳಖೇಡದ ಕಲ್ಯಾಣಕುಮಾರ ಶೀಲವಂತ, ಟೆಂಗಳಿಯ ಮನೋಹರ ವಿಶ್ವಕರ್ಮ ಸಂಗೀತ ಸೇವೆ ನೀಡಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.