ತೊಗರ್ಸಿ ರಥೋತ್ಸವ ಸಂಪನ್ನ

3 ಎಸ್ಕೆಪಿ1
Published on

ಶಿಕಾರಿಪುರ: ತೊಗರ್ಸಿಯ ಮಲ್ಲಿಕಾರ್ಜುನ ಸ್ವಾಮಿ ಮಹಾರಥೋತ್ಸವ ಶುಕ್ರವಾರ ಮಳೆಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಹಾಗೂ ಮಳೆ ಹಿರೇಮಠದ ಕಿರಿಯ ಶ್ರೀಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆ 6 ಗಂಟೆಗೆ ವಿಧ್ಯುಕ್ತವಾಗಿ ಆರಂಭಗೊಂಡ ರಥವು ಗ್ರಾಮದ ರಥಬೀದಿ, ಕವಲಿ ರಸ್ತೆಯ ನಿಗದಿತ ಸ್ಥಳಕ್ಕೆ ಸಾಗಿ 11 ಗಂಟೆಗೆ ಸ್ವಸ್ಥಾನ ಸೇರಿತು. ಮಂಗಲವಾದ್ಯ, ಡೊಳ್ಳು ಕುಣಿತು, ಭಜನೆ, ವೀರಗಾಸೆ ಮತ್ತು ದೇಸಿ ಕಲಾ ಪ್ರಾಕಾರಗಳ ನಡುವೆ ಸಾಗಿದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಪುಷ್ಪಾಲಂಕೃತ ರಥವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು. ಭಕ್ತರು ಬೇರೆ ಬೇರೆ ಜಿ¯್ಲÉಗಳಿಂದ ಎತ್ತಿನಗಾಡಿ, ಟ್ರ್ಯಾಕ್ಟರ್, ದ್ವಿಚಕ್ರ ವಾಹನ ಸೇರಿದಂತೆ ವಿವಿಧ ವಾಹನಗಳಲ್ಲಿ ಆಗಮಿಸಿದ್ದರು.

ಜಾತ್ರೆಯ ಪ್ರಯುಕ್ತ ಬ್ರಾಹ್ಮಿ ಮಹೂರ್ತದಲ್ಲಿ ರುದ್ರಾಭಿಷೇಕ, ಕ್ಷೀರಾಭಿಷೇಕ, ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. -É.28 ರಂದು ಸಣ್ಣ ರಥೋತ್ಸವ ಮತ್ತು ಮಾ.1ರಂದು ಹೂವಿನ ರಥೋತ್ಸವ ಜರುಗಿದ್ದವು.

ಗ್ರಾಮ ಪಂಚಾಯಿತಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ, ತಹಸೀಲ್ದಾರ್ ಮತ್ತು ಸಿಬ್ಬಂದಿ ವರ್ಗ, ಪೆÇೀಲಿಸ್ ಇಲಾಖೆ, ಆರೋಗ್ಯ ಇಲಾಖೆಗಳು ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಕರ್ತವ್ಯ ನಿರ್ವಹಿಸಿದರು.

--------------

3 ಎಸ್ಕೆಪಿ 1

ತೊಗರ್ಸಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net