ತೊಗರಿಗೆ ಹವಾಮಾನ ವೈಪರೀತ್ಯ ಬಾಧೆ

22mdl02
Published on

ಮುದಗಲ್: ತೊಗರಿ ಕಟಾವಿಗೆ ದಿನಗಣನೆ ಆರಂಭವಾಗಿರುವ ನಡುವೆಯೇ ಇತ್ತೀಚಿಗೆ ವಾಯುಭಾರ ಕುಸಿತದಿಂದ ಆದ ಮಳೆಯಿಂದ ಬೆಳೆಗಾರರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಾಗಲಾಪೂರ, ಹಡಗಲಿ, ಛತ್ತರ, ಮರಳಿ, ಉಳಿಮೇಶ್ವರ, ಕನ್ನಾಳ, ಪಿಕಳಿಹಾಳ, ಮೆದಕಿನಾಳ, ತೀರ್ಥಬಾವಿ, ಹಡಗಲಿ, ಮಟ್ಟೂರು, ಕಿಲಾರಹಟ್ಟಿ, ತಿಮ್ಮಾಪೂರ, ಯರದೊಡ್ಡಿ, ಭೋಗಾಪೂರ, ಭೋಗಾಪೂರ ತಾಂಡ, ಕುಮಾರಖೇಡ ಸೇರಿದಂತೆ ವಿವಿಧೆಡೆ ಬೆಳೆದಿರುವ ತೊಗರಿ ಕಟಾವಿಗೆ ಬಂದಿದೆ.

ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ವಾಯುಭಾರ ಕುಸಿತ ಸಂಕಷ್ಟ ತಂದೊಡ್ಡಿದೆ. ಅಕ್ಟೋಬರ್‌ನಲ್ಲಿ ಸುರಿದ ಮಳೆ ಮತ್ತು ಮೋಡ ಮುಸುಕಿದ ವಾತವರಣದಿಂದ ಫಸಲಿಗೆ ಹೊಡೆತಬಿದ್ದಿತ್ತು. ಈಗ ಮತ್ತೆ ಮಳೆಯಾದ ಪರಿಣಾಮ ರೈತರು ದಿಕ್ಕು ತೋಚದಂತಾಗಿದ್ದಾರೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ತೊಗರಿ ಬೆಳೆದಿದ್ದು, ಈಗಿನ ಪರಿಸ್ಥಿತಿಯಲ್ಲಿ ಸಾಲಕ್ಕೆ ಗುರಿಯಾಗುವಂತಾಗಿದೆ.

ತೊಗರಿ ಬೆಳೆದಿರುವ ಹೊಲಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ತೊಗರಿ ನಷ್ಟದ ಪ್ರಮಾಣ ಅಂದಾಜಿಸಿ ರೈತರಿಗೆ ಪರಿಹಾರ ನೀಡುವುದರೊಂದಿಗೆ ಬೆಳೆ ವಿಮೆ ಮಾಡಿಸಿರುವ ರೈತರಿಗೆ ವಿಮೆ ಹಣ ಸಂದಾಯವಾಗುವಂತೆ ಕ್ರಮ ವಹಿಸಬೇಕೆಂಬುದು ರೈತರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net