ತೊಗರಿ ಬೋರ್ಡ್ ಬಲವರ್ಧನೆ ಆಗಲಿ

IMG-20221204-WA0023
Published on

ಕಲಬುರಗಿ: ಸಂಕಷ್ಟದಲ್ಲಿರುವ ತೊಗರಿ ಬೆಳೆಗಾರರ ರಕ್ಷಣೆಗಾಗಿ ತೊಗರಿ ಬೋರ್ಡ್ ಬಲವರ್ಧನೆ ಮಾಡಬೇಕು, ಕ್ವಿಂಟಾಲ್ ತೊಗರಿಗೆ 12 ಸಾವಿರ ರೂ. ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳು ತೊಗರಿ ಬೆಳೆಗಾರರಿಂದ ಕೇಳಿ ಬಂದವು.

ಕಲಬುರಗಿ ನಗರದ ಎಸ್ ಎಂ ಪಂಡಿತ ರಂಗಮಂದಿರದಲ್ಲಿ ರಾಜ್ಯ ಮಟ್ಟದ ತೊಗರಿ ಬೆಳೆಗಾರರ ಸಮಸ್ಯೆಗಳ ಕುರಿತ ವಿಚಾರ ಸಂಕಿರಣದಲ್ಲಿ ಬೆಳಗಾರರ ತೊಂದರೆಗಳು, ಸಮಸ್ಯೆಗಳು ಮೇಲೆ‌ ಬೆಳಕು ಚೆಲ್ಲುವ ಕೆಲಸ ನಾಯಕರು ಮಾಡಿದರು.

ಎಐಕೆಎಸ್ ರಾಷ್ಟ್ರೀಯ ಅದ್ಯಕ್ಷ ಅಶೋಕ ದಾವಳೆ ಮಾತನಾಡಿ, ಕೇಂದ್ರ ಸರ್ಕಾರವು ರೈತರ ಹಿತ ಕಾಪಾಡಲು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ ಪಿ) ಕಾನೂನು ರೂಪ ನೀಡಬೇಕು ಎಂದು ಆಗ್ರಹಿಸಿದರು.

ಶರಬಸಪ್ಪ ಮಮಶೆಟ್ಟಿ, ರೈತ ಮುಖಂಡರು, ನೂರಾರು ತೊಗರಿ ಬೆಳೆಗಾರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net