ತೊಗರಿ ಬೆಳೆ ಹಾನಿ ವಿಮೆ ಪರಿಹಾರಕ್ಕೆ ಆಗ್ರಹ

Vaijinath Jhalaki
Published on

ಕಲಬುರಗಿ: ಜಿಲ್ಲೆಯಲ್ಲಿ ಬೆಳೆದ ತೊಗರಿ ಸೇರಿ ಇತರ ಬೆಳೆ ಬೆಳೆದ ರೈತ ಗ್ರಾಹಕರು ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆ ಅಡಿ ಇಪ್ಕೊ ಟೋಕಿಯೋ ಬೆಳೆ ವಿಮೆ ಕಂಪನಿಗೆ ವಿಮೆ ಮಾಡಿದ್ದು, ಕೊಟ್ಯಂತರ ರೂ. ವಿಮೆ ಹಣ ಪಾವತಿಯಾಗಿದೆ. ಇದೀ ಬೆಳೆ ಹಾನಿಯಾಗಿದ್ದು, ಕೂಡಲೇ ಗ್ರಾಹಕರಿಗೆ ಕಂಪನಿಯೂ ವಿಮೆ ಪರಿಹಾರ ನೀಡಬೇಕು ಎಂದು ಸಮಾಜಸೇವಕ ವಕೀಲ ವೈಜನಾಥ ಝಳಕಿ ಮನವಿ ಮಾಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿರುವ ಅವರು, ಈಗಾಗಲೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ಸೋಯಾಭಿನ ಸೇರಿ ಹಲವು ಬೆಳೆ ಹಾಳಾಗಿ ವಿಮೆ ಮಾಡಿಸಿದ ರೈತರು ನಷ್ಟ ಅನುಭವಿಸಿದ್ದಾರೆ. ಅದು ತೊಗರಿಗೂ ಮುಂದುವರಿಯದೆ ಸಮರ್ಪಕ ವಿಮೆ ದೊರೆಯಬೇಕು. ಜಿಲ್ಲಾಧಿಕಾರಿಗಳು ಕುಡಲೇ ವಿಮಾ ಕಂಪನಿಯೊAದಿಗೆ ಶೇ.೧೦೦ ವಿಮಾ ಪರಿಹಾರ ೧೫ ದಿನದ ಒಳಗೆ ನೇರವಾಗಿ ರೈತರ ಖಾತೆಗೆ ಪಾವತಿಸುವಂತೆ ನಿರ್ದೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ವಿಮೆ ಮಾಡಿಸದ ರೈತರ ಪ್ರತಿ ಎಕರೆಗೆ ೨೫,೦೦೦ ರೂ. ಪರಿಹಾರ ಸರ್ಕಾರದಿಂದ ಒದಗಿಸಲು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net