

ಕಲಬುರಗಿ: ಜನತೆ ಲಾಕ್ಡೌನ್ ಸಂಕಷ್ಟದಲ್ಲಿರುವಾಗ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ವಿಧಾನಸಭೆ ಮುಖ್ಯ ಸಚೇತಕ ಡಾ.ಅಜಯಸಿಂಗ್ ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರು, ಶಾಸಕರು, ಪ್ರಮುಖರ ಜತೆ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪೆಟ್ರೋಲ್ ಮೇಲೆ ಶೇ.200 ಮತ್ತು ಡೀಸೆಲ್ಗೆ ಶೇ.800 ಅಬಕಾರಿ ಸುಂಕ ಏರಿಸಿದ್ದರಿಂದ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದು, ಬೆಲೆ ಹಿಂಪಡೆಯದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಲಾಕ್ಡೌನ್ ನೆರವಿಗೆ ಕೇಂದ್ರ ಸರ್ಕಾರ ಆತ್ಮ ನಿರ್ಭರ್ ಯೋಜನೆಯಡಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಪ್ರಕಟಿಸಿದೆ. ಆದರೆ ಅದಕ್ಕೆ ಬೇಕಿರುವ 18 ಲಕ್ಷ ಕೋಟಿ ರೂ. ಕೇವಲ ಇಂಧನದ ಅಬಕಾರಿ ಸುಂಕ ಹೆಚ್ಚಿಸುವ ಮೂಲಕ ಈಗಾಗಲೇ ಜನರಿಂದ ವಸೂಲಿ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಕರೊನಾ ಕಷ್ಟಕಾಲದಲ್ಲಿ ಜನರಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಮೂಲಕ ಜೀವನ ನಡೆಸಲು ಅನುವು ಮಾಡಿಕೊಡಬೇಕು. ಸ್ಪೇನ್, ಸ್ವೀಡನ್, ಕೆನಡಾದಲ್ಲಿ ಜನರಿಗೆ ನೇರ ಹಣ ಜಮೆ ಮಾಡಲಾಗಿದೆ ಹೊರತು, ಜನಸಾಮಾನ್ಯರ ಪ್ರಯೋಜನಕ್ಕೆ ಬಾರದಂಥ ಬಿಜೆಪಿ ಸಕರ್ಾರದಂಥ ಪ್ಯಾಕೇಜ್ ಘೋಷಿಸಿಲ್ಲ ಎಂದು ಕಿಡಿಕಾರಿದರು.
ಸೈಕಲ್ ತುಳಿದು ಪ್ರತಿಭಟನೆ
ಕೇಂದ್ರ ಮತ್ತು ರಾಜ್ಯ ಸಕರ್ಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಮತ್ತು ತೈಲ ಬೆಲೆ ಕೂಡಲೇ ಇಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸೋಮವಾರ ನಗರದಲ್ಲಿ ಸೈಕಲ್ ತುಳಿದು ಮತ್ತು ಟಾಂಗಾಗಳೊಂದಿಗೆ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ನೇತೃತ್ವದಲ್ಲಿ ಪಕ್ಷದ ಕಚೇರಿಯಿಂದ ಸದರ್ಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ಸರ್ಕಲ್, ಸೂಪರ್ ಮಾಕರ್ೆಟ್, ನೆಹರು ಗಂಜ್ನಿಂದ ಮರಳಿ ಡಿಸಿ ಕಚೇರಿವರೆಗೆ ಸೈಕಲ್ ರಾಲಿ ನಡೆಸಿದರು. ಕೇಂದ್ರ ಸಕರ್ಾರ ತನ್ನ ನಿಲುವು ಹಿಂಪಡೆಯುವ ಮೂಲಕ ಜನರಿಗೆ ಅನುವು ಮಾಡಿಕೊಡುವಂತೆ ಆಗ್ರಹಿಸಿ ಡಿಸಿ ಮೂಲಕ ಪ್ರಧಾನಿಗೆ ಮನವಿಪತ್ರ ಸಲ್ಲಿಸಿದರು.
ಮಾಜಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಕೆ.ಬಿ. ಶಾಣಪ್ಪ, ಶಾಸಕರಾದ ಕನೀಜ್ ಫಾತಿಮಾ, ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್, ಪ್ರಮುಖರಾದ ಜಗನ್ನಾಥ ಗೋಧಿ, ನೀಲಕಂಠ ಮೂಲಗೆ, ಸೈಯದ್ ಅಹ್ಮದ್, ಲತಾ ರಾಠೋಡ್, ಶರಣಕುಮಾರ ಮೋದಿ, ಸಂತೋಷ ಪಾಟೀಲ್ ದುಧನಿ, ನಾರಾಯಣರಾವ ಕಾಳೆ, ಸುಭಾಷ ರಾಠೋಡ್, ಬಸವರಾಜ ಬಿರಾದಾರ ಸೊನ್ನ, ಸಂಜೀವ್ ಐರಡ್ಡಿ, ಡಾ.ಕಿರಣ ದೇಶಮುಖ, ಮಹಾಂತಪ್ಪ ಸಂಗಾವಿ, ಬಾಬು ಒಂಟಿ, ಚಂದ್ರಿಕಾ ಪರಮೇಶ್ವರ, ವಿಜಯಕುಮಾರ ಜಿ.ಆರ್, ಈರಣ್ಣ ಪಾಟೀಲ್ ಝಳಕಿ, ರಾಜಕುಮಾರ ಕಪನೂರ, ಮಜರ್ ಅಲಂಖಾನ್, ಮಲ್ಲಿಕಾಜರ್ುನ ಹಲಕಟರ್ಿ ಇತರರು ಪಾಲ್ಗೊಂಡಿದ್ದರು.
2014ರಲ್ಲಿ ಕೇಂದ್ರದಲ್ಲಿ ಯುಪಿಎ ಸಕರ್ಾರವಿದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 108 ಡಾಲರ್ ಇತ್ತು. ಈಗ ಬ್ಯಾರೆಲ್ಗೆ 43.15 ಡಾಲರ್ಗೆ ಇಳಿದಿದೆ. ಹೀಗಿರುವಾಗ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಲೀಟರ್ಗೆ 25-30 ರೂ.ಗೆ ಮಾರಾಟ ಮಾಡಬೇಕಿತ್ತು. ಆದರೆ ಬಿಜೆಪಿ ಸಕರ್ಾರ ಅಬಕಾರಿ ಸುಂಕ ಹೆಚ್ಚಿಸಿ ಜನರನ್ನು ಪರೋಕ್ಷವಾಗಿ ಸುಲಿಗೆ ಮಾಡುತ್ತಿದೆ.
| ಡಾ.ಅಜಯಸಿಂಗ್
ವಿಧಾನಸಭೆ ಮುಖ್ಯ ಸಚೇತಕ