ತೇವಾಂಶ ಅರಿತು ಉಳುಮೆ ಮಾಡಬೇಕು

23ATHANIGRAMIN2
Published on

ಅಥಣಿ ಗ್ರಾಮೀಣ: ರೈತರು ಬಿತ್ತನೆ ಕೈಗೊಳ್ಳುವಾಗ ಭೂಮಿಯ ತೇವಾಂಶ ಖಚಿತಪಡಿಸಿಕೊಳ್ಳಬೇಕು. ಇಲ್ಲವಾದರೆ ಬೀಜಗಳು ಸರಿಯಾಗಿ ಮೊಳಕೆಯೊಡೆಯದೆ ಉತ್ತಮ ಬೆಳೆ ಪಡೆಯಲು ಸಾಧ್ಯವಿಲ್ಲ ಎಂದು ತೆಲಸಂಗ ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ ಹೇಳಿದರು.

ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ಪಿಕೆಪಿಎಸ್ ಕಾರ್ಯಾಲಯದಲ್ಲಿ ಶುಕ್ರವಾರ ಕೃಷಿ ಇಲಾಖೆಯಿಂದ ಸರ್ಕಾರದ ರಿಯಾಯಿತಿ ದರದಲ್ಲಿ ಮೆಕ್ಕೆಜೋಳ, ತೊಗರಿ, ಉದ್ದು, ಸೋಯಾಬಿನ್ ಬಿತ್ತನೆ ಬೀಜ ವಿತರಿಸಿ ಮಾತನಾಡಿ, ಅಡಹಳ್ಳಿ ಗ್ರಾಮದಲ್ಲಿ ಬೀಜ ವಿತರಣೆ ಕೇಂದ್ರ ತೆರೆಯಲಾಗಿದ್ದು, ಕೂಡಲೇ ಇನ್ನುಳಿದ ಕಕಮರಿ, ಐಗಳಿ, ಕಟಗೇರಿ, ನಂದಗಾಂವ, ಬಡಚಿ, ಕೊಕಟನೂರ, ಕನ್ನಾಳ ಮತ್ತು ತೆಲಸಂಗ ಸೇರಿ ಒಟ್ಟು ೯ ಕೇಂದ್ರ ತೆರೆಯಲಾಗುವುದು ಎಂದು ತಿಳಿಸಿದರು.

ಪಿಕೆಪಿಎಸ್ ಅಧ್ಯಕ್ಷ ಮಹಾದೇವ ಹಿಪ್ಪರಗಿ ಮಾತನಾಡಿದರು. ಮುಖಂಡರಾದ ಆನಂದ ದೂಳಶೆಟ್ಟಿ, ಅಪ್ಪು ಶೇಗಾಂವಿ, ಅನಿಲ ಪಾಟೀಲ, ಗ್ರಾಪಂ ಅಧ್ಯಕ್ಷ ಬಸವಂತ ಗುಡ್ಡಾಪುರ, ಸುನೀಲ ಕೆಂಚಣ್ಣವರ,. ಐ.ಬಿ. ಪಾಟೀಲ, ಎಸ್.ಎಸ್. ಗುಡ್ಡಾಪುರ, ರಾಮು ಹೊನವಾಡ, ಅಣ್ಣಪ್ಪ ಸನದಿ, ಗುರಪ್ಪ ತಾಂವಶಿ, ನಾರಾಯಣ ಪೂಜಾರಿ, ರಮೇಶ ಖೋಬ್ರಿ, ಮಹಾದೇವ ಸನದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net