ತೇಗಲತಿಪ್ಪಿಗೆ ವಿನಮ್ರ ವಿಜಯ' ಪ್ರಶಸ್ತಿ ಪ್ರದಾನ

1106Klb02
Published on

ಕಲಬುರಗಿ: ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಅವರಿಗೆ `ವಿನಮ್ರ ವಿಜಯಕುಮಾರ' ಪ್ರಶಸ್ತಿಯನ್ನು ಕ್ರಿಯಾಶೀಲ ಗೆಳೆಯರ ಬಳಗದಿಂದ ನೀಡಿ ಗೌರವಿಸಲಾಯಿತು.
ವಿಶ್ವಜ್ಯೋತಿ ಪ್ರತಿಷ್ಠಾನದ 12ನೇ ವರ್ಷಾಚರಣೆ ನಿಮಿತ್ತ ಎಕೆಆರ್ ದೇವಿ ಪಿಯು ಕಾಲೇಜಿನ ಆವರಣದಲ್ಲಿ ಗುರುವಾರ ಆಯೋಜಿಸಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಎಚ್ಕೆಸಿಸಿಐ ಉಪಾಧ್ಯಕ್ಷ ಶರಣು ಪಪ್ಪಾ, ತೇಗಲತಿಪ್ಪಿ ಅವರ ಕಾರ್ಯ ವೈಖರಿಗೆ ಸಂದ ಗೌರವವಾಗಿದೆ ಎಂದರು.
ಸಾಹಿತಿ ಜಗನ್ನಾಥ ತರನಳ್ಳಿ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಪ್ರೊ.ಯಶ್ವಂತರಾಯ ಅಷ್ಟಗಿ, ಹಿರಿಯ ಲೇಖಕಿ ಶಕುಂತಲಾ ಪಾಟೀಲ್, ಪಿಡಿಎ ಇಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ, ಎಕೆಆರ್ ದೇವಿ ಪಿಯು ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ, ತಾಲೂಕು ಕಸಾಪ ಉಪಾಧ್ಯಕ್ಷ ಭೀಮಾಶಂಕರ ಯಳಮೇಲಿ, ಕಲ್ಯಾಣಕುಮಾರ ಶೀಲವಂತ, ಭುವನೇಶ್ವರಿ ಹಳ್ಳಿಖೇಡ, ರವೀಂದ್ರಕುಮಾರ ಭಂಟನಳ್ಳಿ, ಡಾ.ಕೆ.ಗಿರಿಮಲ್ಲ, ಶ್ರೀಕಾಂತ ಪಾಟೀಲ್ ತಿಳಗೂಳ, ಪರಮೇಶ್ವರ ಶಟಕಾರ, ಶಿವರಾಜ ಅಂಡಗಿ, ಜಗದೀಶ ಮರಪಳ್ಳಿ, ಎಸ್.ಎಂ.ಪಟ್ಟಣಕರ್, ಪ್ರಭವ ಪಟ್ಟಣಕರ್, ಹಣಮಂತ ಅಟ್ಟೂರ, ಮೀನಾಕ್ಷಿ, ಲಕ್ಷ್ಮೀ ಕುಂಬಾರ, ರಮೇಶ ಕುಲಕರ್ಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net