ತೇಗಂಪುರ ಕೆರೆಗೆ ವಿಷಪೂರಿತ ನೀರು

Capture3
Published on

ಭಾಲ್ಕಿ: ತಾಲೂಕಿನ ತೇಗಂಪುರ ಗ್ರಾಮದ ಕೆರೆಗೆ ವಿಷಪೂರಿತ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಶಾಸಕ ಈಶ್ವರ ಖಂಡ್ರೆ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮದ ಪ್ರಮುಖರಾದ ಶಿವಕುಮಾರ ಪಾಟೀಲ್, ಮಲ್ಲಿಕಾಜರ್ುನ ಪ್ರಭಾ, ಸಂತೋಷ ಪಾಟೀಲ್ಮತ್ತಿತರು ಗ್ರಾಮದ ಜನರಿಗೆ ಬಳಕೆ ಹಾಗೂ ಕುಡಿವ ನೀರಿಗೆ ಆಧಾರವಾಗಿದ್ದ ಏಕೈಕ ತೆರೆದ ಬಾವಿ ಮತ್ತು ಕೆರೆಗೆ ಕಳೆದ ಹದಿನೈದು ದಿನಗಳಿಂದ ಕಲುಷಿತ ನೀರು ಸೇರುತ್ತಿದೆ. ಈ ನೀರು ಬಳಕೆಯಿಂದ ಜನರಿಗೆ ಚರ್ಮ ರೋಗದ ಭೀತಿ ಎದುರಾಗಿದೆ. ಕುಡಿವ ನೀರಿಗೂ ಪರದಾಡುವಂತಾಗಿದೆ ಎಂದು ಶಾಸಕರ ಗಮನಕ್ಕೆ ತಂದರು.

ಕಲುಷಿತ ನೀರು ಸೇವನೆಯಿಂದ ಜನರು ವಿವಿಧ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ. ಶುದ್ಧ ನೀರು ಪೂರೈಕೆಗೆ ತಕ್ಷಣವೇ ಕೊಳವೆ ಬಾವಿ ಕೊರೆಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ದೂರವಾಣಿ ಮೂಲಕ ಜಿಲ್ಲಾಧಿಕಾರಿಗೆ ಮಾತನಾಡಿದ ಶಾಸಕರು, ತಾಲೂಕಿನ ತೇಗಂಪುರ, ಕೋನಮೇಳಕುಂದಾ, ಸಿದ್ದೇಶ್ವರ, ಕುರುಬಖೇಳಗಿ, ಚಿಕಲಚಂದಾ ಸೇರಿ ಮುಂತಾದ ಕಡೆಗಳಲ್ಲಿ ಹಳ್ಳಕೊಳ್ಳ, ಚೆಕ್ಡ್ಯಾಮ್, ಕೆರೆಗಳಿಗೆ ಹಲವು ದಿನಗಳಿಂದ ವಿಷಪೂರಿತ ನೀರು ಹರಿಯುತ್ತಿದೆ. ಕೂಡಲೇ ತಾವುಗಳು ಭೇಟಿ ನೀಡಿ ಪರಿಶೀಲಿಸಿ ಸಂಬಂಧಿತರಿಗೆ ವಿಷಪೂರಿತ ಬಿಡದಂತೆ ತಕ್ಷಣ ನೋಟಿಸ್ ನೀಡಿ ಎಚ್ಚರಿಸಬೇಕೆಂದು ತಿಳಿಸಿದರು.

ತಹಸೀಲ್ದಾರ್ ಕೀತರ್ಿ ಚಾಲಕ್, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಮಾಣಿಕರಾವ, ಪ್ರಮುಖರಾದ ಶಶಿಧರ ಕೋಸಂಬೆ, ಅಶೋಕ ಸೋನಜಿ, ರಮೇಶ ಪ್ರಭಾ, ಧನರಾಜ ಪಾಟೀಲ್, ರವಿ ಬೋರವೆಲ್ಸ್ ಮಾಲೀಕ ರವೀಂದ್ರ ಚಿಡಗುಪ್ಪೆ, ಗ್ರಾಪಂ ಅಧ್ಯಕ್ಷ ರಜನಿಕಾ ಪಾಟೀಲ್, ಸದಸ್ಯ ರಮೇಶ ಬೆಲ್ದಾರ್, ಗೋಪಾಲರಾವ ಬಿರಾದಾರ, ಕಲಾವತಿ ಮೆಟಾರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net