ತೆಲಂಗಾಣದಲ್ಲಿ ಅರಣ್ಯನಾಶ ಅತ್ಯಂತ ಖಂಡನೀಯ

Published on

ಚಾಮರಾಜನಗರ: ತೆಲಂಗಾಣ ರಾಜ್ಯದಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡುವ ಉದ್ದೇಶದಿಂದ 400 ಎಕರೆ ಅರಣ್ಯ ಭೂಮಿಯನ್ನು ನಾಶಮಾಡಿರುವುದು ಅತ್ಯಂತ ಖಂಡನೀಯ ಎಂದು ರೈತ ಮುಖಂಡ ಹೆಗ್ಗವಾಡಿಪುರ ಮಹೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ತೆಲಂಗಾಣದಲ್ಲಿ ಅರಣ್ಯ ನಾಶ ಮಾಡಿರುವವರ ವಿರುದ್ಧ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರು ಕ್ರಮ ಕೈಗೊಳ್ಳಬೇಕು. ಅರಣ್ಯ ನಾಶಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದು ಸ್ವಾಗತಾರ್ಹ. ಅದಾಗ್ಯೂ ಈ ರೀತಿಯ ಘಟನೆ ಮರುಕಳಿಸದ ಹಾಗೇ ನೋಡಿಕೊಳಬೇಕು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ರಾತ್ರೋರಾತ್ರಿ 200ರಕ್ಕೂ ಹೆಚ್ಚು ಜೆಸಿಬಿಯಿಂದ ಅರಣ್ಯನಾಶ ಮಾಡಿರುವುದರಿಂದ ಅಲ್ಲಿನ ಹಲವಾರು ಪ್ರಾಣಿ ಪಕ್ಷಿಗಳು ನಾಶವಾಗಿದೆ. ಅರಣ್ಯದಲ್ಲಿ ಇಷ್ಟೆಲ್ಲಾ ಅನಾಹುತ ನಡೆದರೂ, ಆ ರಾಜ್ಯದ ವಿರೋಧ ಪಕ್ಷದವರು ಸುಮ್ಮನೆ ಕೈಕಟ್ಟಿ ಕುಳಿತಿರುವುದು ವಿಪರ್ಯಾಸ ಎಂದರು. ಗೋಷ್ಠಿಯಲ್ಲಿ

ಎಚ್.ಡಿ.ಮಹದೇವಸ್ವಾಮಿ, ಪಟೇಲ್ ನಾಗರಾಜು, ನಂಜುಂಡಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net