ತೆರಿಗೆ ವಂಚನೆ,ಪಿಡಿಒ ಎನ್.ಪಾಲಯ್ಯ ಸಸ್ಪೆಂಡ್

suspended
Published on

ಚಿತ್ರದುರ್ಗ: ಅಧಿಕಾರ,ಹಣ ದುರುಪಯೋಗ ಆರೋಪದಡಿ ಚಳ್ಳಕೆರೆ ತಾಲೂಕು ನನ್ನಿವಾಳ ಗ್ರಾಪಂನ ಹಿಂದಿನ ಹಾಗೂ ಪ್ರಸ್ತುತ ಚಿತ್ರದುರ್ಗ ತಾ ಲೂಕು ಚಿಕ್ಕಗೊಂಡನಹಳ್ಳಿ ಗ್ರಾಪಂ ಪಿಡಿಒ ಕರ್ತವ್ಯದಲ್ಲಿರುವ ಎನ್.ಪಾಲಯ್ಯ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಪಂ ಸಿ ಇಒ ಎಸ್.ಜೆ.ಸೋಮಶೇಖರ್ ಶುಕ್ರವಾರ ಆದೇಶಿಸಿದ್ದಾರೆ.
ಆಡಳಿತ ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳದಿರುವುದು,ಸರ್ಕಾರಿ ಯೋಜನೆಗಳ ದುರ್ಬಳಕೆ,ಹಲವು ಬಡಾವಣೆಗಳಲ್ಲಿ ನಿವೇಶನಗಳಿಗೆ ಕಾನೂನು ಬಾಹಿರವಾಗಿ ಇ-ಸ್ವತ್ತು ವಿತರಿಸಿರುವುದು,ಹೊಸ ಬಡಾವಣೆ ರಚನೆಗೆ ಸಂಬಂಧಿಸಿದಂತೆ ಬೊಕ್ಕಸಕ್ಕೆ ನಷ್ಟ ಉಂ ಟು ಮಾಡಿರುವುದು,ಭೂತಯ್ಯಲೇಔಟ್ ಉದ್ಯಾನ ಜಾಗದಲ್ಲಿ ಅಕ್ರಮವಾಗಿ ನಿವೇಶನ ಮಾಡಿರುವುದು. ಸಿಬ್ಬಂದಿ ವೇತನ,14,15ನೇ ಹ ಣಕಾಸು ಯೋಜನೆ ಹಣ ದುರುಪಯೋಗ, ಕಿವುಡ-ಮೂಗರಿಗೆ ಹಂಚಿಕೆಯಾದ ನಿವೇಶನ ದುರ್ಬಳಕೆ.
ಹೊಸ ಬಡಾವಣೆ ಅಭಿವೃದ್ಧಿ ಶುಲ್ಕ,ತೆರಿಗೆ ಪಾವತಿಸದೆ ಖಜಾನೆಗೆ ಲಕ್ಷಾಂತರ ರೂ.ವಂಚಿಸಿರುವುದು. ಆಯಿಲ್‌ಮಿಲ್,ಜಲ್ಲಿ ಕ್ರಷರ್‌ಗ ಳಿಂದ ವೈಯಕ್ತಿಕ ಲಾಭ ಪಡೆದು,ಸಣ್ಣ ಮೊತ್ತದ ತೆರಿಗೆ ಸಂಗ್ರಹಿಸಿ ಗ್ರಾಪಂಗೆ ನಷ್ಟ ಉಂಟು ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ನೀ ಡಿದ್ದ ನೋಟಿಸ್‌ಗೆ ಉತ್ತರಿಸದ ಹಿನ್ನೆಲೆಯಲ್ಲಿ ಸಿಒಒ ತನಿಖೆ ಕಾಯ್ದಿರಿಸಿ ಪಾಲಯ್ಯ ಅವರನ್ನು ಸಸ್ಪೆಂಡ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net