ತೆರಿಗೆ ಪಾವತಿಗೆ ನಗರಸಭೆಯಲ್ಲೇ ಕೌಂಟರ್

2
Published on

ಗೌರಿಬಿದನೂರು: ವಿವಿಧ ಕಂದಾಯಗಳ ಪಾವತಿಗಾಗಿ ಬ್ಯಾಂಕ್‌ಗೆ ಅಲೆದಾಡಬೇಕಾಗಿದ್ದ ನಗರದ ಜನತೆ ಇನ್ನು ಮುಂದೆ ನಗರಸಭೆಯಲ್ಲೇ ಪಾವತಿಗೆ ವ್ಯವಸ್ಥೆ ಕಲ್ಪಿಸಲು ಅಡಳಿತ ಮಂಡಳಿ ಮುಂದಾಗಿದೆ.

ಜನರು ಮನೆ ಕಂದಾಯ, ನೀರಿನ ಕಂದಾಯ, ಆಸ್ತಿ ಕಂದಾಯ ಪಾವತಿಸಬೇಕಾದ್ರೆ ಬ್ಯಾಂಕ್‌ಗೆ ತೆರಳಿ ಗಂಟೆಗಟ್ಟಲೆ ಸರದಿ ಸಾಲಲ್ಲಿ ನಿಲ್ಲಬೇಕಿತ್ತು. ಇದರಿಂದ ವೃದ್ಧರು ಮಹಿಳೆಯರು ನರಕ ಯಾತನೆ ಅನುಭವಿಸಬೇಕಿತ್ತು. ಈ ಸಮಸ್ಯೆಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ನಗರಸಭೆ ಮಹತ್ವದ ಹೆಜ್ಜೆಯಿರಿಸಿದ್ದು, ಕಚೇರಿಯಲ್ಲೇ ಬ್ಯಾಂಕ್ ಕೌಂಟರ್ ತೆರೆಯುವ ನಿಲುವನ್ನು ಕೈಗೊಂಡಿದೆ.

ನಗರದ ಕೊಟಕ್ ಮಹೀಂದ್ರಾ ಬ್ಯಾಂಕ್ ಕೌಂಟರ್ ತೆರೆಯಲು ಮುಂದೆ ಬಂದಿದ್ದು, ಬುಧವಾರ ಬ್ಯಾಂಕಿನ ವ್ಯವಸ್ಥಾಪಕ ಶ್ರೀನಿವಾಸರೆಡ್ಡಿ ನಗರಸಭೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗ್ಗೆಯಿಂದ ಮಧ್ಯಾಹ್ನದ ಕಚೇರಿ ವೇಳೆಯಲ್ಲಿ ನಾಗರೀಕರು ಕಂದಾಯ ಪಾವತಿಸಲು ವ್ಯವಸ್ಥೆ ಕಲ್ಪಿಸಲು ನಗರಸಭೆಯಿಂದ ಅಗತ್ಯ ಸಿಬ್ಬಂದಿ ನೇಮಿಸಲಾಗುತ್ತಿದೆ. ಇದರಿಂದ ಒಂದೇ ಮಳಿಗೆಯಲ್ಲಿ ವಿವಿಧ ರೀತಿಯ ಕಂದಾಯಗಳನ್ನು ಪಾವತಿಸಲು ಸಹಕಾರಿಯಾಗಿರುವುದರಿಂದ ಜನರ ಪರದಾಟಕ್ಕೆ ಮುಕ್ತಿ ಸಿಗಲಿದೆ.

ಕಂದಾಯ ಪಾವತಿಗೆ ಜನತೆ ಪರದಾಡುವುದನ್ನು ತಪ್ಪಿಸುವ ಉದ್ದೇಶದಿಂದ ನಗರಸಭೆಯಲ್ಲೇ ಬ್ಯಾಂಕ್ ಕೌಂಟರ್ ಪ್ರಾರಂಭಿಸಲಾಗುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಂಡು ಸಕಾಲಕ್ಕೆ ತೆರಿಗೆ ಪಾವತಿಸುವ ಮೂಲಕ ನಗರದ ಅಭಿವೃದ್ಧಿಗೆ ಸಹಕರಿಸಬೇಕು. ರೂಪಾ ಅನಂತರಾಜು, ನಗರಸಭೆ ಅಧ್ಯಕ್ಷೆ ************ ಮಹಿಂದ್ರಾ ಕೊಟಕ್ ಬ್ಯಾಂಕ್ ನಮ್ಮ ಪ್ರಸ್ತಾವನೆಗೆ ಒಪ್ಪಿ ನಗರಸಭೆಯಲ್ಲಿ ಕೌಂಟರ್ ತೆರೆಯಲು ನಿರ್ಧರಿಸಿದೆ. ಸಿಬ್ಬಂದಿ ನೇಮಕ ಅಗತ್ಯ ವ್ಯವಸ್ಥೆ ಮಾಡಿದ ಕೂಡಲೆ ಕೌಂಟರ್‌ಗೆ ಚಾಲನೆ ನೀಡಲಾಗುವುದು. ಬಳಿಕ ತೆರಿಗೆ ಪಾವತಿ ಜನರಿಗೆ ಸುಲಭವಾಗಲಿದೆ. ಸತ್ಯನಾರಾಯಣ, ನಗರಸಭೆ ಆಯುಕ್ತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net