ತೆರವುಗೊಳಿಸಿದ ಸ್ಥಳದಲ್ಲೇ ಚನ್ನಮ್ಮಾಜಿ ವೃತ್ತ ನಿರ್ವಿುಸಿ

10 lxr 1
Published on

StartFragment

ಲಕ್ಷ್ಮೇಶ್ವರ: ಸಿಂದಗಿಯಲ್ಲಿ ತೆರವುಗೊಳಿಸಿದ ಸ್ಥಳದಲ್ಲೇ ವೀರರಾಣಿ ಕಿತ್ತೂರ ಚನ್ನಮ್ಮಾಜಿ ವೃತ್ತವನ್ನು ಮರು ನಿರ್ವಿುಸುವಂತೆ ಲಕ್ಷ್ಮೇಶ್ವರ ತಾಲೂಕು ಪಂಚಮಸಾಲಿ ಸೇವಾ ಸಮಿತಿಯಿಂದ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರರಿಗೆ ಬುಧವಾರ ಸಲ್ಲಿಸಿದರು.

ಚನ್ನಮ್ಮಾಜಿಯನ್ನು ಪಂಚಮಸಾಲಿ ಸಮಾಜಕ್ಕೆ ಸೀಮಿತಗೊಳಿಸದೇ ಸ್ವಾತಂತ್ರ್ಯ ಹೋರಾಟಗಾರ್ತಿಯನ್ನಾಗಿ ಗುರುತಿಸಬೇಕು. ಸಿಂದಗಿ ಪಟ್ಟಣದಲ್ಲಿ ಚನ್ನಮ್ಮಾಜಿ ವೃತ್ತ ತೆರವುಗೊಳಿಸಿರುವುದು ಖಂಡನೀಯ. ತಾಲೂಕಾಡಳಿತ ತೆರವುಗೊಳಿಸಿದ ಸ್ಥಳದಲ್ಲೇ ಮತ್ತೆ ಚನ್ನಮ್ಮಾಜಿ ವೃತ್ತ, ಪುತ್ಥಳಿ ಪ್ರತಿಷ್ಠಾಪಿಸಬೇಕು. ಇಲ್ಲದಿದ್ದರೆ ಸಮಾಜದಿಂದ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಉಪತಹಸೀಲ್ದಾರ್ ಎಂ.ಜಿ. ದಾಸಪ್ಪನವರ ಮನವಿ ಸ್ವೀಕರಿಸಿದರು.

ಸಮಿತಿ ತಾಲೂಕಾಧ್ಯಕ್ಷ ರಮೇಶ ಹಾಳದೋಟದ, ಉಪಾಧ್ಯಕ್ಷ ಮಹೇಶ ಹೊಗೆಸೊಪ್ಪಿನ, ಸಂತೋಷ ಜಾವೂರ, ನಾಗರಾಜ ಚಿಂಚಲಿ, ಉಳವೇಶ ಪಾಟೀಲ, ಬಸವರಾಜ ಹೊಗೆಸೊಪ್ಪಿನ, ರುದ್ರಪ್ಪ ಉಮಚಗಿ, ಜಗದೀಶಗೌಡ ಪಾಟೀಲ, ಮಂಜುನಾಥ ಮಾಗಡಿ, ಎಸ್.ಎಫ್. ಆಚಾರ್, ಪ್ರವೀಣ ಗುರಿಕಾರ, ರುದ್ರಪ್ಪ ಆದಿ, ಮುತ್ತು ಕರ್ಜೆಕಣ್ಣವರ, ವೀರೇಶ ಕಮತದ, ಈರಣ್ಣ ಪೂಜಾರ, ಅರುಣ ಮೆಕ್ಕಿ, ಇತರರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net