ಹಲಗೂರು: ಸಮೀಪದ ಮುತ್ತತ್ತಿಯ ಕಾವೇರಿ ನದಿಯಲ್ಲಿ ತೆಪ್ಪ ಮಗುಚಿ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಚನ್ನಪಟ್ಟಣ ತಾಲೂಕಿನ ಮೊಳೆದೊಡ್ಡಿ ಗ್ರಾಮದ ರಾಮಚಂದ್ರಯ್ಯ ಎಂಬುವರ ಪುತ್ರ ಮಾದೇಶ್ (30) ಮೃತರು. ಹಲವು ವರ್ಷಗಳಿಂದ ಮುತ್ತತ್ತಿಯಲ್ಲಿರುವ ವಾಹನಗಳ ಪಾಕಿರ್ಂಗ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಇಬ್ಬರು ಸ್ನೇಹಿತರೊಂದಿಗೆ ಕಾವೇರಿ ನದಿಯಲ್ಲಿ ತೆಪ್ಪದಲ್ಲಿ ತೆರಳುತ್ತಿದ್ದಾಗ ಆಕಸ್ಮಿಕವಾಗಿ ತೆಪ್ಪ ಮಗುಚಿದೆ. ತೆಪ್ಪದಲ್ಲಿದ್ದ ವೆಂಕಟರಾಮು ಮತ್ತು ಮಹದೇವ ಎಂಬುವರು ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾದೇಶನಿಗೆ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನುರಿತ ಈಜುಗಾರರ ಸಹಾಯದಿಂದ ಬುಧವಾರ ಸಂಜೆ ಶವವನ್ನು ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವ ನೀಡಲಾಯಿತು. ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.