

ಕೊಡಗು : ಕೈಲ್ ಪೊವ್ದ್ ಹಬ್ಬದ ಅಂಗವಾಗಿ ಮಾಯಮುಡಿ ಗ್ರಾಮದ ಐರನ್ ಸೈಟ್ ಶೂಟರ್ಸ್ ಸಂಘಟನೆ ವತಿಯಿಂದ ಗೋಣಿಕೊಪ್ಪದಲ್ಲಿ ಭಾನುವಾರ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು.
ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ 22 ರೈಫಲ್, 12ನೇ ಬೋರ್ ವಿಭಾಗದ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ವಕೀಲ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ, ಅಹಮ್ಮದಾಬಾದ್‌ನ ಡೆಪ್ಯೂಟಿ ಕಮಿಷನರ್ ಕೊಟ್ಟಂಗಡ ಡಿ.ಪೆಮ್ಮಯ್ಯ, ಕೊಡವ ಸಮಾಜ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಮುಖಂಡರಾದ ಮಾಚಿಮಂಡ ಬಿ.ಗಪ್ಪಣ್ಣ, ಡಾ.ಮಾತಂಡ ಆರ್.ಅಯ್ಯಪ್ಪ, ಕಾಳಪಂಡ ಟಿಪ್ಪು ಬಿದ್ದಪ್ಪ, ಅಪ್ಪನೆರವಂಡ ಮನೋಜ್ ಮಂದಪ್ಪ, ಕಾಳಪಂಡ ಸಿ.ಸುಧೀರ್, ಬಲ್ಲಣಮಾಡ ರೀಟಾ ಅಪ್ಪಯ್ಯ ಇದ್ದರು.