ತೆಂಗಿನ ನಾರು ಘಟಕಕ್ಕೆ ಆಕಸ್ಮಿಕ ಬೆಂಕಿ

25 CRP 01
Published on

ಚನ್ನರಾಯಪಟ್ಟಣ: ತಾಲೂಕಿನ ಪಿ.ಹೊಸಹಳ್ಳಿ ಗ್ರಾಮದ ಬಳಿಯಿರುವ ತೆಂಗಿನ ನಾರು ತಯಾರಿಕಾ ಘಟಕಕ್ಕೆ ಶನಿವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ ಬಹುತೇಕ ಭಸ್ಮವಾಗಿದೆ.


ಗ್ರಾಮದ ಮುದಿಬೆಟ್ಟ ಕಾವಲು ರಸ್ತೆಯಲ್ಲಿರುವ ಕಲ್ಪತರು ಕೊಕೊನೆಟ್ ಪ್ರಾಡೆಕ್ಟ್‌ನ ಕೈಗಾರಿಕಾ ಘಟಕದಲ್ಲಿ ಸಂಗ್ರಹಿರಿಸಿದ್ದ ತೆಂಗಿನ ನಾರಿನ ಗುಡ್ಡೆಯಲ್ಲಿ ಮೊದಲು ಬೆಂಕಿ ಕಾಣಿಸಿದೆ. ಗ್ರಾಮದ ಕೆಲ ಯುವಕರು ಹಾಗೂ ಘಟಕದ ಕಾರ್ಮಿಕರು ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದರೂ ಬೆಂಕಿ ಹತೋಟಿಗೆ ಬಂದಿಲ್ಲ. ಕೆಲವೇ ನಿಮಿಷದಲ್ಲಿ ಹಲವು ಯಂತ್ರಗಳು, ಸಂಸ್ಕರಣೆ ಮಾಡಿದ್ದ ತೆಂಗಿನ ನಾರು, ಸಾವಿರಾರು ತೆಂಗಿನ ಸಿಪ್ಪೆಗಳು ಸೇರಿದಂತೆ ಎಲ್ಲವು ಬೆಂಕಿಗಾಹುತಿ ಆಗಿವೆ.

ಚನ್ನರಾಯಪಟ್ಟಣದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸತತ 6 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ಹತೋಟಿಗೆ ತಂದರು. ಮೂರು ದಿನದಿಂದ ಘಟಕದಲ್ಲಿನ ಯಂತ್ರಗಳ ಕೆಲಸ ನಿಲ್ಲಿಸಲಾಗಿತ್ತು. ಆಕಸ್ಮಿಕ ಬೆಂಕಿ ಅವಘಡದಿಂದ ಅಪಾರ ನಷ್ಟವಾಗಿದೆ ಎಂದು ನಾರು ಘಟಕ ಮಾಲೀಕ ಚೇತನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net