ತೂಗುಸೇತುವೆ ದುರಸ್ತಿಗಾಗಿ ನಿಸರ್ಗಧಾಮ ಬಂದ್

Published on

ಕುಶಾಲನಗರ: ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಕುಶಾಲನಗರ ಕಾವೇರಿ ನಿಸರ್ಗ ಧಾಮದಲ್ಲಿರುವ ತೂಗು ಸೇತುವೆಯ ದುರಸ್ತಿ ಕಾರ್ಯಕ್ಕಾಗಿ ನಿಸರ್ಗಧಾಮಕ್ಕೆ ಪ್ರವಾಸಿಗರ ನಿಷೇಧ ಹೇರಲಾಗಿದೆ ಎಂದು ಡಿಆರ್‌ಎಫ್‌ಒ ವಿಕಾಸ್ ತಿಳಿಸಿದ್ದಾರೆ.


ಮಂಗಳವಾರದಿಂದ ದುರಸ್ತಿ ಕಾರ್ಯ ಆರಂಭವಾಗಿದೆ. ಸುಳ್ಯದ ಆಯುಷ್ ಶಿಲ್ಪ ಎನ್ನುವ ಸಂಸ್ಥೆಗೆ ವಹಿಸಲಾಗಿದೆ. ಗುಜರಾತ್‌ನಲ್ಲಿ ನಡೆದ ಘಟನೆಯ ನಂತರ ರಾಜ್ಯದಲ್ಲಿ ಎಚ್ಚೆತ್ತುಕೊಂಡಿರುವ ಇಲಾಖೆ ಈ ನಿರ್ಧಾರ ಮಾಡಿದೆ. ನಿಸರ್ಗಧಾಮದ ಈ ತೂಗುಸೇತುವೆ ಹಲವು ದಿನಗಳಿಂದ ಹಾಳಾದ ಪರಿಸ್ಥಿತಿಯಲ್ಲಿ ಇತ್ತು. ಇತ್ತೀಚೆಗೆ ಈ ತಾಣಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿತ್ತು. ದುರಸ್ತಿ ಕಾರ್ಯ ಪೂರ್ಣಗೊಂಡ ನಂತರ ಪ್ರವೇಶಕ್ಕೆ ಮುಕ್ತವಾಗಲಿದೆ ಎಂದು ವಿಕಾಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net