ತುಳಜಾಪುರಕ್ಕೆ ಹೆಚ್ಚುವರಿ ಬಸ್ ಆರಂಭ

6BK3
Published on

ಬಸವಕಲ್ಯಾಣ: ದಸರಾ ಹಬ್ಬದ ನಿಮಿತ್ತ ತುಳಜಾಪುರ ಅಂಬಾ ಭವಾನಿ ದರ್ಶನಕ್ಕೆ ತೆರಳುವ ಭಕ್ತರಿಗೆ ಅನುಕೂಲ ಕಲ್ಪಿಸಲು ನಗರದ ಬಸ್ ಘಟಕದಿಂದ ಶುಕ್ರವಾರ ಬಸ್ ಸಂಚಾರ ಪ್ರಾರಂಭಿಸಲಾಯಿತು. ಸಸ್ತಾಪುರ ಬಂಗ್ಲಾ ಬಳಿ ಪೂಜೆ ಸಲ್ಲಿಸಿ, ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಸುವರ್ಣಾ ಚಾಲನೆ ನೀಡಿದರು.

ಪ್ರಯಾಣಿಕರಿಗೆ ಅನುಕೂಲವಾಗಲು ಅ.೬ರಿಂದ ನ.೧೧ರವರೆಗೆ ನಿತ್ಯ ಬಸ್ ಓಡಿಸಲಾಗುವುದು. ಸದ್ಯ ಶುಕ್ರವಾರ ಎರಡು ಬಸ್ ಬಿಡಲಾಗಿದೆ. ಮುಂದಿನ ದಿನಗಳಲ್ಲಿ ಭಕ್ತರು ಹೆಚ್ಚಾದಾಗ ಬಸ್‌ಗಳು ಹೆಚ್ಚು ಓಡಿಸಲಾಗುವುದು. ಬೇರೆ ಕಡೆ ತೆರಳುವ ಬಸ್‌ಗಳಲ್ಲಿ ತೊಂದರೆಯಾಗದ ರೀತಿ ವ್ಯವಸ್ಥೆ ಮಾಡಲಾಗುವುದು ಎಂದು ವ್ಯವಸ್ಥಾಪಕ ಮೊಹಮ್ಮದ್ ನಯೀಮ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net