ತುರುವೇಕೆರೆಯಲ್ಲಿ ಎರಡು ಅಪರಿಚಿತ ಶವ ಪತ್ತೆ

Published on

ತುಮಕೂರು: ತುರುವೇಕೆರೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ 2 ಅಪರಿಚಿತ ಶವಗಳು ಪತ್ತೆಯಾಗಿರುವ ಬಗ್ಗೆ ಪ್ರತ್ಯೇಕ ದೂರು ದಾಖಲಾಗಿವೆ. ಸಿ.ಎಸ್​.ಪುರ ಗ್ರಾಮದ ಕಡೆ ಹೋಗುವ ಸಿಗೇಹಳ್ಳಿ ಗೇಟ್​ ಬಳಿ ರಸ್ತೆ ಬಲಬದಿಯಲ್ಲಿ ಜು.14ರಂದು ಸುಮಾರು 40 ವರ್ಷದ ಅಪರಿಚಿತ ಶವ ಪತ್ತೆಯಾಗಿದೆ. ಮೃತನು 165 ಸೆಂ.ಮೀ. ಎತ್ತರ, ಕಪು$್ಪ ಮೈಬಣ್ಣ, ಕೋಲು ಮುಖ, ಸಾಧಾರಣ ಶರೀರ ಹೊಂದಿದ್ದು, ಮೈಮೇಲೆ ನೀಲಿ ಬಣ್ಣದ ಹೂವಿನ ಚಿತ್ರವಿರುವ ಕ್ರೀಂ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ನೀಲಿ ಬಣ್ಣದ ಲುಂಗಿ ಇರುತ್ತದೆ. ಕಲ್ಕೆರೆ ಕಡೆಯಿಂದ ತುರುವೇಕೆರೆ ಕಡೆಗೆ ಹೋಗುವ ಹಳ್ಳದಲ್ಲಿ ಜು.15ರಂದು ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net