ತುಮಕೂರಿಗೆ ವರ್ಷದ ಸ್ಮಾರ್ಟ್ ಸಿಟಿ ಪ್ರಶಸ್ತಿ

29Tmk_Smart_City_Award
Published on

ವಿಜಯವಾಣಿ ಸುದ್ದಿಜಾಲ ತುಮಕೂರು
ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ 8ನೇ ಸ್ಮಾರ್ಟ್‌ಸಿಟಿ ಇಂಡಿಯಾ ಎಕ್ಸ್‌ಪೋನಲ್ಲಿ ತುಮಕೂರು ನಗರಕ್ಕೆ ‘ವರ್ಷದ ಸ್ಮಾರ್ಟ್ ಸಿಟಿ’ ಪ್ರಶಸ್ತಿ ಗೌರವ ದೊರೆತಿದೆ.
ನವದೆಹಲಿಯ ಪ್ರಗತಿ ಮೈದಾನದಲ್ಲಿ ಬುಧವಾರ 8ನೇ ಸ್ಮಾರ್ಟ್‌ಸಿಟಿ ಇಂಡಿಯಾ ಎಕ್ಸ್‌ಪೋನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 2022ರ ಸಾಲಿನಲ್ಲಿ ದೇಶಾದ್ಯಂತ 100 ಸ್ಮಾರ್ಟ್‌ಸಿಟಿಗಳ ಆರೋಗ್ಯ, ಶಿಕ್ಷಣ, ಕ್ರೀಡೆ, ಮೂಲ ಸೌಕರ್ಯ, ರಸ್ತೆ, ಅಭಿವೃದ್ಧಿ, ನಗರದ ಸೌಂದರ‌್ಯೀಕರಣ, ಮನರಂಜನೆ, ನಾಗರೀಕರ ಸುರಕ್ಷತೆ ಹಾಗೂ ಕಣ್ಗಾವಲಿಗೆ ಅಗತ್ಯವಾದ ಕಮ್ಯಾಂಡ್ ಸೆಂಟರ್ ನಿರ್ಮಾಣ ಮುಂತಾದ ಯೋಜನೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿರುವುದನ್ನು ಪರಿಗಣಿಸಿ ಅಖಿಲ ಭಾರತ ಮಟ್ಟದಲ್ಲಿ ನೀಡಲಾಗುವ ‘ಸ್ಮಾರ್ಟ್‌ಸಿಟಿ ಆಫ್ ದಿ ಇಯರ್’ ಪ್ರಶಸ್ತಿಗೆ ತುಮಕೂರು ಸ್ಮಾರ್ಟ್‌ಸಿಟಿ ಭಾಜನವಾಗಿದೆ. ಸ್ಮಾರ್ಟ್‌ಸಿಟಿ ಲಿಮಿಟೆಡ್ ತುಮಕೂರಿನ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ವರ್ಷದ ಪ್ರಶಸ್ತಿ ಪಡೆಯಲು ಕಾರಣಕರ್ತರಾದ ತುಮಕೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ಅಧ್ಯಕ್ಷರು, ನಿರ್ದೇಶಕ ಮಂಡಳಿ, ನಗರದ ನಾಗರೀಕರು, ಸಿಬ್ಬಂದಿ ವರ್ಗದವರಿಗೆ ಧನ್ಯವಾದ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net